ಬೆಳ್ತಂಗಡಿ: ಹೆದ್ದಾರಿ-73ರ ಬಳಿ ರಸ್ತೆಗೆ ಉರುಳಿದ ಮರ ➤ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ: ಜು.9, ರಾಷ್ಟ್ರೀಯ ಹೆದ್ದಾರಿ 73 ಮಂಗಳೂರು- ಚಿಕ್ಕಮಗಳೂರು ರಸ್ತೆಯ ಮುಂಡಾಜೆ ಸೋಮಂತಡ್ಕ ಸಮೀಪದ ಅಂಬಡ್ತ್ಯಾರು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು,ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಇಂದು ಮುಂಜಾನೆ ಸುಮಾರಿಗೆ 6.45ರ ಸುಮಾರಿಗೆ ಬೃಹದಾಕಾರದ ಮರ ರಸ್ತೆಗೆ ಉರುಳಿ ಬಿದ್ದಿದೆ. ಹಾಗಾಗಿ ಕೆಲವು ವಾಹನಗಳು ಬದಲಿ ಮಾರ್ಗದಲ್ಲಿ ಸಂಚಾರ ಮುಂದುವರಿಸಿದವು. ಮರ ರಸ್ತೆಗೆ ಉರುಳಿರುವುದರಿಂದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಇದೇ ರಸ್ತೆಯ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರ್ಕಳ‌ ಶಾಸಕ ಸುನೀಲ್ ಕುಮಾರ್ ಕೂಡಾ ರಸ್ತೆಗೆ ಮರ ಬಿದ್ದ ಕಾರಣ ಸಮಸ್ಯೆಗೆ ಸಿಲುಕಿಕೊಂಡರು. ಅರಣ್ಯ ಇಲಾಖೆ ಸಿಬಂದಿಗಳು ಸ್ಥಳಕ್ಕಾಗಮಿಸಿ ಮರ ತೆರವು ಮಾಡಿದ್ದಾರೆ. ಸುಮಾರು ಒಂದು ತಾಸು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ದಟ್ಟಣೆ ಕಡಿಮೆ ಇರುವ ಕಾರಣ ದೊಡ್ಡ ಮಟ್ಟದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ.

Also Read  ಬ್ರಹ್ಮಾವರ : ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಮಕ್ಕಳ ಅಭ್ಯಾಸದ ಕುರಿತು ಪರಿಶೀಲನೆ

error: Content is protected !!
Scroll to Top