ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಕಡತಗಳಿಗೆ ಹಾನಿ

(ನ್ಯೂಸ್ ಕಡಬ)newskadaba.com ಉಡುಪಿ: ಇಲ್ಲಿನ ಜಾಮೀಯ ಮಸೀದಿ ಬಳಿಯಿರುವ ಯೂನಿಯನ್ ಬ್ಯಾಂಕ್ ನಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬ್ಯಾಂಕ್ ನ ಹವಾನಿಯಂತ್ರಕದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ನಾಲ್ಕು ಕಂಪ್ಯೂಟರ್ ಗಳು ಹಾಗೂ ಹಲವು ಕಡತಗಳಿಗೆ ಹಾನಿಯಾಗಿದೆ.

ಉಡುಪಿಯ ಅಗ್ನಿ ಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ತಕ್ಷಣವೇ ಬೆಂಕಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಡೆಯಲಾಗಿದೆ. ಸದ್ಯ ಬ್ಯಾಂಕ್ ನಲ್ಲಿ ಯಥಾಪ್ರಕಾರ ಕೆಲಸ ಕಾರ್ಯಗಳು ನಡೆಯುತ್ತಿದೆ. ಉಡುಪಿ ವೃತ್ತ ನಿರೀಕ್ಷಕರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Also Read  ಕಾಸರಗೋಡಿನಲ್ಲಿ ಹೆಚ್ಚುತ್ತಿರುವ ಕೊರೋನಾ ಎರಡನೇ ಅಲೆ ➤ ದ.ಕ ಜಿಲ್ಲೆಯ ಹಲವು ಗಡಿ ಬಂದ್ ಗೆ ಜಿಲ್ಲಾಧಿಕಾರಿ ಆದೇಶ ➤ ಜಿಲ್ಲೆಗೆ ಪ್ರವೇಶಿಸುವ ವೇಳೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

error: Content is protected !!
Scroll to Top