➤➤ ವಿಶೇಷ ಲೇಖನ ಪ್ಲೂ (ಇನ್ ಪ್ಲುಯೆಂಜಾ) ಮತ್ತು ಕೋವಿಡ್-19 ವ್ಯತ್ಯಾಸಗಳೇನು..? ✍? ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ)newskadaba.com ಪ್ಲೂ ಎಂಬುದು ವೈರಾಣು ಸೋಂಕು ಆಗಿದ್ದು, ಇನ್‍ಪ್ಲೂಯೆಂಜಾ ಎಂಬ ವೈರಾಣುವಿನಿಂದ ಹರಡುತ್ತದೆ ಮತ್ತು ಕೋವಿಡ್-19 ರೋಗ ಕೊರೋನಾ ಗುಂಪಿಗೆ ಸೇರಿದ SARS=Cov-2 ಎಂಬ ವೈರಾಣುವಿನಿಂದ ಹರಡುತ್ತದೆ.

1) ಪ್ಲೂ ಅಥವಾ ಇನ್‍ಪ್ಲೂಯೆಂಜಾ ಸೋಂಕಿನಲ್ಲಿ ಅತಿಯಾದ ಜ್ವರ ಇರುತ್ತದೆ ಮತ್ತು 3 ರಿಂದ 4 ದಿನಗಳ ಕಾಲ ಇರಬಹುದು. ಕೋವಿಡ್-19 ನಲ್ಲಿಯೂ ಜ್ವರ ಇರುತ್ತದೆ.

2) ಇನ್‍ಪ್ಲೂಯೆಂಜಾ ಸೋಂಕಿನಲ್ಲಿ ಸಾಮಾನ್ಯವಾಗಿ ವಿಪರೀತ ತಲೆ ನೋವು ಮತ್ತು ತಲೆ ಭಾರ ಇರುತ್ತದೆ. ಆದರೆ ಕೋವಿಡ್-19 ನಲ್ಲಿ ಕೆಲವೊಮ್ಮೆ ಮಾತ್ರ ಸಾಮಾನ್ಯ ತಲೆನೋವು ಇರುತ್ತದೆ.

3) ಇನ್‍ಪ್ಲೂಯೆಂಜಾದಲ್ಲಿ ವಿಪರೀತ ಸುಸ್ತು ಆಯಾಸ, ದಣಿವು ಇರುತ್ತದೆ ಮತ್ತು 2 ರಿಂದ 3 ವಾರಗಳ ಕಾಲ ಮುಂದುವರಿಯಬಹುದು. ಆದರೆ ಕೋವಿಡ್-19ನಲ್ಲಿ ಸ್ವಲ್ಪಮಟ್ಟಿನ ಸುಸ್ತು ದಣಿವು ಇರುತ್ತದೆ.

4) ಇನ್‍ಪ್ಲೂಯೆಂಜಾದಲ್ಲಿ ಅತಿಯಾದ ಮೈಕೈ ನೋವು, ಸ್ನಾಯು ಸೆಳೆತ ಇರುತ್ತವೆ. ಕೋವಿಡ್-19ನಲ್ಲಿ ಸ್ವಲ್ಪಮಟ್ಟಿನ ಮೈಕೈ ನೋವು ಇರುತ್ತದೆ.

5) ಇನ್‍ಪ್ಲೂಯೆಂಜಾ ಮತ್ತು ಕೋವಿಡ್-19 ಎರಡರಲ್ಲೂ ಶೀತ, ಮೂಗು ಕೆರೆತ, ಅಕ್ಷಿ (ಸೀನುವಿಕೆ) ಕಂಡುಬರುತ್ತದೆ.

6) ಗಂಟಲು ಕೆರೆತ, ಇನ್‍ಪ್ಲೂಯೆಂಜಾ ಮತ್ತು ಕೋವಿಡ್-19 ಎರಡೂ ರೋಗಗಳಲ್ಲಿ ಕಂಡು ಬರುತ್ತದೆ.

7) ಇನ್‍ಪ್ಲೂಯೆಂಜಾ ಮತ್ತು ಕೋವಿಡ್-19 ಎರಡರಲ್ಲೂ ಕೆಮ್ಮು ಮತ್ತು ಒಣ ಕೆಮ್ಮು ಇರುವ ಸಾಧ್ಯತೆ ಇರುತ್ತದೆ.

8) ಇನ್‍ಪ್ಲೂಯೆಂಜಾ ರೋಗದಲ್ಲಿ ಉಸಿರಾಟದ ತೊಂದರೆ ಕಂಡು ಬರುವುದು ಬಹಳ ವಿರಳ. ಆದರೆ ಕೋವಿಡ್-19 ರೋಗದಲ್ಲಿ ಮುಂದುವರಿದ ಹಂತದಲ್ಲಿ ಉಸಿರಾಟದ ತೊಂದರೆ ಕಂಡುಬರುತ್ತದೆ.

9) ರುಚಿ ಕಂಡು ಹಿಡಿಯಲು ಕಷ್ಟವಾಗುವುದು ಮತ್ತು ವಾಸನೆ ಇಲ್ಲದಿರುವುದು ಕೋವಿಡ್-19 ರೋಗದಲ್ಲಿ ಕೆಲವೊಮ್ಮೆ ಕಂಡು ಬಂದಿರುತ್ತದೆ. ಆದರೆ ಇನ್‍ಪ್ಲೂಯೆಂಜಾ ರೋಗದಲ್ಲಿ ಇದು ಅತ್ಯಂತ ವಿರಳವಾಗಿರುತ್ತದೆ.

10) ಬೇಧಿ ಮತ್ತು ಅತಿಸಾರ ಕೋವಿಡ್-19 ರೋಗದಲ್ಲಿ ಕಂಡು ಬಂದಿದೆ. ಆದರೆ ಇನ್‍ಪ್ಲೂಯೆಂಜಾ ರೋಗದಲ್ಲಿ ವಿರಳವಾಗಿರುತ್ತದೆ.

11) ಪ್ಲೂ ಮತ್ತು ಕೋವಿಡ್-19 ಎರಡರಿಂದಲೂ ನ್ಯೂಮೋನಿಯಾ ಸೋಂಕು ಉಂಟಾಗಬಹುದು. ಆದರೆ ಕೋವಿಡ್-19 ನಲ್ಲಿ ಈ ಸಾಧ್ಯತೆ ಹೆಚ್ಚಾಗಿರುತ್ತದೆ.

12) ಮರಣದ ಪ್ರಮಾಣ ಪ್ಲೂ ರೋಗದಲ್ಲಿ 01 ಶೇಕಡಾ ಇರುತ್ತದೆ ಮತ್ತು ಕೋವಿಡ್-19 ರೋಗದಲ್ಲಿ 3.5% ಇರುತ್ತದೆ.

13) ಎರಡೂ ರೋಗಗಳು ಒಂದೇ ರೀತಿಯಲ್ಲಿ ಹರಡುತ್ತದೆ. ಸೀನಿದಾಗ, ಕೆಮ್ಮಿದಾಗ ಕಿರುಕಣಗಳ ಮುಖಾಂತರ ಹರಡುತ್ತದೆ ಎರಡೂ ರೋಗಗಳು ಸೋಂಕಿತ ವ್ಯಕ್ತಿಗಳಿಂದ ರೋಗ ಲಕ್ಷಣ ಕಾಣಿಸಿಕೊಳ್ಳುವ ಮೊದಲೇ ಹರಡುವ ಸಾಧ್ಯತೆ ಇರುತ್ತದೆ. ಕಿಟಕಿ ಅವಧಿ ಅಥವಾ ವಿಂಡೋ ಪೀರಿಯಡ್ ಪ್ಲೂ ರೋಗಕ್ಕೆ 3 ದಿನ ಇರುತ್ತದೆ ಮತ್ತು ಕೋವಿಡ್-19 ರೋಗಕ್ಕೆ 6 ರಿಂದ 9 ದಿನ ಇರುತ್ತದೆ.

 

ಡಾ|| ಮುರಲೀ ಮೋಹನ ಚೂಂತಾರು

error: Content is protected !!

Join the Group

Join WhatsApp Group