ಮಾಜಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ನಿಧನ



(ನ್ಯೂಸ್ ಕಡಬ)newskadaba.com ಪುತ್ತೂರು, ಜು.7, ಮಾಜಿ ಕ್ರಿಕೆಟ್‌ ಆಟಗಾರ ಪುತ್ತೂರು ಜೈನ ಬಸದಿ ಬಳಿಯ ನಿವಾಸಿ ವಾರಿಸೇನ ಶೆಟ್ಟಿ(90 ವ)ರವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ನೆಲ್ಲಿಕಟ್ಟೆ ಮಿತ್ರ ಮಂಡಳಿಯ ಅಸ್ತಿತ್ವದಲ್ಲಿ ಸಕ್ರೀಯ ಆಟಗಾರರಾಗಿದ್ದರು.





ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಮೃತರು ಪುತ್ರಿಯರಾದ ಜ್ಯೋತಿ, ವಾಣಿಶ್ರೀ, ಮಾಲಿನಿ ಮತ್ತು ಪುತ್ರ ರಾಜೇಶ್ ಅವರನ್ನು ಅಗಲಿದ್ದಾರೆ.






error: Content is protected !!
Scroll to Top