ರೈತರಿಂದ ನೇರವಾಗಿ ಸರ್ಕಾರ ಹಸುವಿನ ಸೆಗಣಿ ಖರೀದಿಸುವ ಯೋಜನೆಗೆ ಚಾಲನೆ

(ನ್ಯೂಸ್ ಕಡಬ) newskadaba.com.ಛತ್ತೀಸಗಢ,ಜು.6: ಛತ್ತೀಸಗಢ ಸರಕಾರವು ಹೊಸ ಯೋಜನೆಯ ಮೂಲಕ ರೈತರ ನೆರವಿಗೆ ಧಾವಿಸಿದೆ. ಸರ್ಕಾರವು ಗೋಧನ್‌ ನ್ಯಾಯ ಯೋಜನೆ ಎನ್ನುವ ಯೋಜನೆಯನ್ನು ಆರಂಭಿಸಿ ಸಾವಯವ ವಿಧಾನದಲ್ಲಿ ಕೃಷಿ ಬೆಳೆಯುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸರ್ಕಾರ ಆರಂಭಿಸಿದೆ.

ಈ ಯೋಜನೆಯ ಭಾಗವಾಗಿ ಇದೀಗ ಕೃಷಿಕರಿಂದ ರಾಜ್ಯ ಸರ್ಕಾರ ಹಸುವಿನ ಸೆಗಣಿ ಖರೀದಿಗೆ ಮುಂದಾಗಿದೆ. ಪ್ರತಿ ಕಿಲೋಗ್ರಾಂಗೆ 1.50 ರೂಪಾಯಿಯಂತೆ ಸೆಗಣಿ ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಚಿವ ರವೀಂದ್ರ ಚೌಬೆ ನೇತೃತ್ವದ ಸಚಿವಸಂಪುಟದ ಉಪಸಮಿತಿಯು.ಈ ನಿರ್ಧಾರ ಕೈಗೊಂಡಿದೆ. ಛತ್ತೀಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಜೂನ್25ರಂದು ಗೋಧನ್‌ ನ್ಯಾಯ ಯೋಜನೆ ಆರಂಭಿಸಿದ್ದರು. ದೊಡ್ಡ ಪ್ರಮಾಣದಲ್ಲಿ ಎರೆಹುಳುಗೊಬ್ಬರ ತಯಾರಿಸುವ ನಿಟ್ಟಿನಲ್ಲಿ ಇದನ್ನು ಬಳಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

Also Read  ಪೊಲೀಸ್​​ ಅಧಿಕಾರಿಯನ್ನು ಬಲಿ ಪಡೆದ ಕೋಳಿ..!!

ಜಾನುವಾರು ಸಾಕಣೆಯನ್ನು ಉತ್ತೇಜಿಸುವುದು, ಜಾನುವಾರುಗಳ ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಹೊಂದಿದೆ. ರೈತರಿಂದ ನೇರವಾಗಿ ಸೆಗಣಿ ಸಂಗ್ರಹ ಮಾತ್ರವಲ್ಲದೇ ಸ್ವಸಹಾಯ ಗುಂಪುಗಳ ಮಹಿಳೆಯರು ಮನೆ ಮನೆಗೆ ತೆರಳಿ ಸಗಣಿ ಸಂಗ್ರಹಿಸುವುದಕ್ಕೂ ಇಲ್ಲಿ ಅನುಮತಿ ನೀಡಲಾಗಿದೆ.

 

error: Content is protected !!
Scroll to Top