ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು ➤ ಎಂಟು ಪ್ರಯಾಣಿಕರು ಮೃತ್ಯು

(ನ್ಯೂಸ್ ಕಡಬ)newskadaba.com ನ್ಯೂಯಾರ್ಕ್, ಜು.06, ಆಕಾಶ ಮಾರ್ಗದಲ್ಲಿ ವಿಮಾನಗಳ ನಡುವೆ ಪರಸ್ಪರ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ಘಟನೆ ಅಮೇರಿಕಾ ದೇಶದ ಇದಾಹೊ ರಾಜ್ಯದಲ್ಲಿ ನಡೆದಿದೆ.

ಘಟನೆಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದಾಹೊ ರಾಜ್ಯದ ಕೆಯೂರ್ ಡಿ ಅಲೆನ್ ಸರೋವರಕ್ಕೆ ಈ ಎರಡು ವಿಮಾನಗಳು ಅಪಘಾತವಾಗಿ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂಬ ವರದಿಯು ದೊರೆತಿದೆ. ಎರಡು ಲಘು ವಿಮಾನಗಳಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು, ಇದರಲ್ಲಿ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿದ್ದು, ಎರಡು ವರ್ಷದ ಮಗು ಸೇರಿ ಇನ್ನೂ ಆರು ಜನರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಲ್ಲಿ ಅವರೆಲ್ಲಾ ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯ ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

Also Read  ಕೊರೊನಾ ಪರಿಣಾಮದಿಂದ ಭಾರತಕ್ಕೆ ಬರಲಾಗದೆ ಕಂಗಾಲಾದ ಚೀನಾ ದಂಪತಿ

error: Content is protected !!
Scroll to Top