ಕೋವಿಡ್ ಕೇರ್ ಕೇಂದ್ರಗಳಲ್ಲಿ ತುರ್ತು ನಿಗಾ ಘಟಕ ಸ್ಥಾಪನೆ ➤ ಸರಕಾರದ ಮಹತ್ವದ ತೀರ್ಮಾನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು. 06, ರಾಜ್ಯ ಸರ್ಕಾರವು ಕೊರೋನಾ ಸೋಂಕಿತರ ಚಿಕಿತ್ಸೆಗೆ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಕೋವಿಡ್ ಕೇರ್ ಕೇಂದ್ರಗಳಲ್ಲಿ ತುರ್ತು ನಿಗಾ ಘಟಕಗಳನ್ನು (ಐಸಿಯು) ಸ್ಥಾಪಿಸಲು ನಿರ್ಧರಿಸಿದೆ.

ಅಂತರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದಲ್ಲಿ ಕೋವಿಡ್ ಬೆಡ್ ಮೊದಲಾದ ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ ಅವರು, ಪ್ರತಿ ಕೋವಿಡ್ ಕೇರ್ ಕೇಂದ್ರದಲ್ಲೂ 10 ಐಸಿಯು ಘಟಕಗಳನ್ನು ತೆರೆಯಲಾಗುತ್ತದೆ. ವಸ್ತು ಪ್ರದರ್ಶನ ಕೇಂದ್ರದಲ್ಲಿ 100 ಐಸಿಯು ಬೆಡ್‌ಗಳನ್ನು ಮಾಡಿ, ಎಲ್ಲಾ ಸೌಲಭ್ಯಗಳನ್ನು ಮಾಡಲಾಗುತ್ತದೆ. ನಗರದಲ್ಲಿ ಕೊರೋನಾ ಸೋಂಕಿತರು ತುಂಬಿದ್ದಲ್ಲಿ ವಸ್ತು ಪ್ರದರ್ಶನ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಕೋವಿಡ್ ಕೇರ್‌ಗಳಲ್ಲಿ ವೈದ್ಯರು ಮತ್ತು ನರ್ಸ್ ಗಳಿಗೆ ವೈದ್ಯಕೀಯೇತರ ಕಾರ್ಯಗಳು ಇರುವುದಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥಾಪಕರನ್ನು ನಿಯೋಜನೆ ಮಾಡಲಾಗಿದೆ. ವೈದ್ಯರು, ನರ್ಸ್‌‌ಗಳು ಸೋಂಕಿತರಿಗೆ ಚಿಕಿತ್ಸೆ ನೀಡುವುದರಲ್ಲಿ ಗಮನವಹಿಸಿ, ಯಾವುದೇ ಕಾರಣಕ್ಕೂ ನಿಮ್ಮ ಮೇಲೆ ಯಾವುದೇ ಒತ್ತಡವನ್ನು ಹೇರುವುದಿಲ್ಲ. ನಿಮ್ಮ ಜವಾಬ್ದಾರಿ ನಮ್ಮದು, ಸರ್ಕಾರ ನಿಮ್ಮ ಜೊತೆಗಿದೆ ಎಂದು ಭರವಸೆ ನೀಡಿದರು.

Also Read  ಆನ್ಲೈಿನ್ ರಮ್ಮಿ ಗೇಮ್ ನ ಸಾಲ ತೀರಿಸಲು ಎಳನೀರು ಕಳ್ಳತನಗೈದ ಭೂಪ..!

error: Content is protected !!
Scroll to Top