ಮಂಗಳೂರು: ಕೊರೋನಾಗೆ ಇನ್ನೊಂದು ಬಲಿ ➤ ಮೃತರ ಸಂಖ್ಯೆ 23ಕ್ಕೇರಿಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.06, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಮಿತಿ ಮೀರಿ ಹರಡುತ್ತಿದ್ದು, ಸೋಂಕಿನ ಕಾರಣದಿಂದ ಇಂದು ಮತ್ತೋರ್ವ ಮೃತಪಟ್ಟಿದ್ದಾರೆ. ಇದರಿಂದ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 23ಕ್ಕೇರಿಕೆಯಾಗಿದೆ.

ಮಂಗಳೂರು ಹೊರವಲಯದ ಸಂತೋಷ್ ನಗರ ನಿವಾಸಿ 52 ವರ್ಷ ಪ್ರಾಯದ ಅವರು ಹೃದಯರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರು ಇಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ವೇಗದಲ್ಲಿ ಏರಿಕೆ ಕಾಣುತ್ತಿದೆ. ರವಿವಾರ ಒಂದೇ ದಿನ ಜಿಲ್ಲೆಯಲ್ಲಿ 147 ಮಂದಿ ಹೊಸ ಸೋಂಕಿತರ ಕಂಡುಬಂದಿದ್ದರು. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1234ಕ್ಕೆ ಏರಿಕೆಯಾಗಿದೆ. ಈ ಪೈಕಿ 10 ಮಂದಿ ಐಸಿಯೂನಲ್ಲಿ ಚಿಕಿತ್ಸೆ‌ಪಡೆಯುತ್ತಿದ್ದಾರೆ.

Also Read  ಕಾಸರಗೋಡು: ವಿವಾಹ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

error: Content is protected !!
Scroll to Top