ಸುಸೈಡ್ ಪಾಯಿಂಟ್ ಖ್ಯಾತಿಯ ನೇತ್ರಾವತಿ ಸೇತುವೆಗೆ ಬಿತ್ತು ರಕ್ಷಣಾ ಬೇಲಿ

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜು.5:  ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಪದೇ ಪದೇ ನಡೆಯುತ್ತಿರುವ ಅನಾಹುತಗಳನ್ನು ಮನಗೊಂಡು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೇತುವೆಯ ಉದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನಡೆಯಿತು.


ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌ರವರು ಚಾಲನೆ ನೀಡಿದರು. ಉಳ್ಳಾಲ ನೇತ್ರಾವತಿ ಸೇತುವೆಗೆ 55 ಲಕ್ಷ ರೂ. ವೆಚ್ಚದಲ್ಲಿ ರಕ್ಷಣಾ ಬೇಲಿ ಮತ್ತು ಸಿಸಿ ಕೆಮರಾ ಅಳವಡಿಸಲಾಗುವುದು. ಉಕ್ಕಿನ ಸರಳುಗಳನ್ನು ಉಪಯೋಗಿಸಿ ಸೇತುವೆಯ ಇಕ್ಕೆಲಗಳಲ್ಲಿ 800 ಮೀ. ಉದ್ದದ ರಕ್ಷಣಾ ಬೇಲಿ ನಿರ್ಮಾಣ ಮಾಡಲಾಗುವುದು ಎಂದು ವೇದವ್ಯಾಸ ಕಾಮತ್‌ರವರು ತಿಳಿಸಿದರು.

Also Read  ಕ್ಷುಲ್ಲಕ ಕಾರಣಕ್ಕಾಗಿ ಬಾಲಕರನ್ನು ಥಳಿಸಿ ಹೊಂಡಕ್ಕೆ ಎಸೆದ ವ್ಯಕ್ತಿ➤ಆರೋಪಿ ಪರಾರಿ

ಇದೇ ವೇಳೆ ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್‌, ಪಾಲಿಕೆ ಮೇಯರ್‌ ದಿವಾಕರ್‌ ಪಾಂಡೇಶ್ವರ್‌, ಕಾರ್ಪೊರೇಟರ್‌ ವೀಣಾ ಮಂಗಳಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top