ಸುಬ್ರಹ್ಮಣ್ಯ: ರಸ್ತೆಗೆ ಬಿದ್ದ ಬೃಹತ್ ಬಿದಿರು ಹಿಂಡು ತಲೂರು ಸ್ನೇಹ ಯುವ ಬಳಗದ ಸದಸ್ಯರಿಂದ ತೆರವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.04. ಸುಳ್ಯ – ಸುಬ್ರಹ್ಮಣ್ಯ ರಸ್ತೆಯ ಎಲಿಮಲೆ ಸಮೀಪದ ತಲೂರು ಎಂಬಲ್ಲಿ ರಸ್ತೆಗಡ್ಡವಾಗಿ ಬಿದ್ದ ಬೃಹತ್ ಬಿದಿರು ಹಿಂಡನ್ನು ತಲೂರು ಮೆತ್ತಡ್ಕದ ಸ್ನೇಹ ಯುವ ಬಳಗದ ಸದಸ್ಯರು ತೆರವುಗೊಳಿಸಿದರು.

ಲಾರಿಯನ್ನು ನಿಲ್ಲಿಸಿ ಅದರ ಮೇಲೇರಿ ಬಿದಿರು ಹಿಂಡನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಜಯಂತ್ ತಲೂರ್, ದುರ್ಗಾದಾಸ್ ಮೆತ್ತಡ್ಕ, ವರ್ಷಿತ್ ಪಿ.ಪಿ., ಯತೀಶ್ ತಲೂರು, ಜೀವನ್ ಪಿ., ದಯಾನಂದ ಮೆತ್ತಡ್ಕ, ದಾಮೋದರ ಅಂಬೆಕಲ್ಲು, ಓಂ ಪ್ರಸಾದ್ ಕಜೆ ಮೊದಲಾದವರು ಸಹಕರಿಸಿದರು.

Also Read  ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಮಂಗಳೂರು ➤ರೈಲ್ವೇ ನಿಲ್ದಾಣದಲ್ಲಿ ತಪಾಸಣೆ

error: Content is protected !!
Scroll to Top