ಬೆಳ್ತಂಗಡಿ ಕಳಿಯ ಗ್ರಾಮ ಪಂಚಾಯತ್‍ಗೆ ಎಸಿಬಿ ದಾಳಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.4: ತಾಲೂಕಿನ ಗೇರುಕಟ್ಟೆ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಬಿ ಇನ್ಸ್‌ಪೆಕ್ಟರ್ ಯೊಗೀಶ್ ಕುಮಾರ್ ಬಿ.ಸಿ. ತಂಡ ಶನಿವಾರ ದಾಳಿ ನಡೆಸಿ ದಾಖಲೆಗಳ ಪರೀಶೀಲನೆ ನಡೆಸಿದೆ.

ಗ್ರಾಮ ಲೆಕ್ಕಿಗ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿ ಒಂದೇ ಕುಟುಂಬಕ್ಕೆ ಎರಡು, ಮೂರು 94ಸಿ ಹಕ್ಕು ಪತ್ರ ನೀಡಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಮನೆ ನಿರ್ಮಾಣವಾಗದಿದ್ದರೂ ಹಕ್ಕು ಪತ್ರ ನೀಡಲಾಗಿದೆ ಎಂದು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹದ ದಳದ ಪೊಲೀಸರಿಗೆ ದೂರು ನೀಡಿದ್ದರು.

Also Read  ಕುಂದಾಪುರ: ಬಸ್ ಹರಿದು ವಿದ್ಯಾರ್ಥಿಯೋರ್ವ ಮೃತ್ಯು

ಅಧಿಕಾರಿಗಳು ದಾಖಲೆ ಪರೀಶೀಲನೆ ನಡೆಸುತ್ತಿದ್ದಾರೆ. ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್, ಶ್ಯಾಮ್ ಸುಂದರ್ , ಹರಿ ಪ್ರಸಾದ್, ಪ್ರಶಾಂತ್  ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ವರ್ಗವಾಗಿದೆ.

error: Content is protected !!
Scroll to Top