(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜು.4: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಶುಕ್ರವಾರ ಬಂಟ್ವಾಳ ವ್ಯಾಪ್ತಿಯಲ್ಲಿ ನೀರಿನ ಮಟ್ಟ 3.6 ಮೀ.ನಷ್ಟು ದಾಖಲಾಗಿದೆ.
ಘಟ್ಟ ಪ್ರದೇಶದಲ್ಲಿ ಮಳೆಯಾದಾಗ ನೇತ್ರಾವತಿ, ಕುಮಾರಧಾರಾ ನದಿಗಳಲ್ಲಿ ನೀರು ಹೆಚ್ಚಾಗುತ್ತದೆ. ನೀರಿನ ಹರಿವು ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನಲ್ಲಿ ಗೇಟ್‌ಗಳನ್ನು ತೆರೆಯಲಾಗುತ್ತಿದೆ. ಪ್ರಸ್ತುತ 30ರ ಪೈಕಿ 11 ಗೇಟ್‌ಗಳನ್ನು ತೆರೆಯಲಾಗಿದೆ.
ಮಳೆಗಾಲದಲ್ಲಿ ಬಂಟ್ವಾಳ ತಾಲೂಕು ಆಡಳಿತವು ಗೂಡಿನಬಳಿ ಸಮೀಪದಲ್ಲಿರುವ ಅಳತೆ ಮಾಪನದ ಮೂಲಕ ನೀರಿನ ಮಟ್ಟ ಪರೀಕ್ಷಿಸುತ್ತಿದ್ದು, ಜೂನ್ ಆರಂಭದಲ್ಲಿ 4 ಮೀ. ಗಳಿಗಿಂತಲೂ ಹೆಚ್ಚಿತ್ತು. ಆಗ ತುಂಬೆ ಡ್ಯಾಂನ ಹೆಚ್ಚಿನ ಗೇಟ್ ತೆರೆದಿರಲಿಲ್ಲ. ಪ್ರಸ್ತುತ ಹೆಚ್ಚಿನ ಗೇಟ್ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ಬಂಟ್ವಾಳದ ಮೇಲ್ಭಾಗ ದಲ್ಲಿರುವ ಶಂಭೂರು ಎಎಂಆರ್ ಅಣೆಕಟ್ಟಿ ನಲ್ಲೂ ವಿದ್ಯುತ್ ಉತ್ಪಾ ದನೆ ನಡೆಯುತ್ತಿದ್ದು, ನೀರು ಹೊರ ಹರಿಯುತ್ತಿದೆ.