ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವರಿಗೆ ಕೊರೊನಾ ಪಂಚಾಯತ್ ಸೀಲ್‍ಡೌನ್

(ನ್ಯೂಸ್ ಕಡಬ) newskadaba.com.ಬೈಂದೂರು,ಜು.3: ತಾಲೂಕಿನ ಪಡುವರಿ ಗ್ರಾಮ ಪಂಚಾಯತಿನ ಸಿಬ್ಬಂದಿಯೋರ್ವರಿಗೆ ಕೊರೊನಾ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸೇರಿ ಪಂಚಾಯತ್ ಸಂಕೀರ್ಣವನ್ನು ಸೀಲ್‍ಡೌನ್ ಮಾಡಲಾಗಿದೆ.

ಪಡುವರಿ ಗ್ರಾಮ ಪಂಚಾಯತ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು ಶುಕ್ರವಾರ ವರದಿ ಪಾಸಿಟಿವ್ ಬಂದಿದ್ದು ಇದರಿಂದಗಿ ತಕ್ಷಣ ಪಂಚಾಯತ್‍ನ್ನು ಸೀಲ್ ಡೌನ್ ಮಾಡಲಾಗಿದೆ.

ಈ ಪಂಚಾಯತ್ ಸಂಕೀರ್ಣದಲ್ಲಿ ಅಂಚೆ ಕಛೇರಿ, ವಿ.ಎ ಕಛೇರಿ, ಗ್ರಂಥಾಲಯ ಇದೆ. ಎಲ್ಲವನ್ನು ಬಂದ್ ಮಾಡಿ ಸ್ಯಾನಿಟೈಸರ್ ಮಾಡಿಸಲಾಗುತ್ತದೆ. ಪಂಚಾಯತ್ ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ವ್ಯಕ್ತಿಗೆ ಹೇಗೆ ಕೋವಿಡ್ ಬಂತು ಎನ್ನುವುದು ಮಾತ್ರ ನಿಗೂಢವಾಗಿದೆ.

Also Read  ಕರ್ನಾಟಕದಲ್ಲಿ ಚುನಾವಣಾ ಅಕ್ರಮ    ➤ ರಾಜ್ಯದಲ್ಲಿ ಇದೂವರೆಗೆ 93 ಕೋಟಿ ರೂ. ವಶಕ್ಕೆ

error: Content is protected !!
Scroll to Top