ತುಳುನಾಡಿನ ಚರಿತ್ರೆಗೆ ದೊರೆತ ಮಹತ್ವದ ಮನ್ನಣೆ ➤ ಪಠ್ಯಪುಸ್ತಕವಾಗಲಿದೆ ತುಳುನಾಡಿನ ಚರಿತ್ರೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.3: ವಿದ್ಯಾರ್ಥಿಗಳು ಈಗಾಗಲೇ ಪ್ರಾಚೀನ ಇತಿಹಾಸಗಳನ್ನು ಪಠ್ಯಪುಸ್ತಕಗಳ ಮೂಲಕ ವಿವಿಧ ಭಾಷೆಗಳಲ್ಲಿ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಅಧ್ಯಯನ ಮಾಡುತ್ತಿದ್ದಾರೆ. ಇದೀಗ ಹೊಸ ಸೇರ್ಪಡೆ ಎಂಬಂತ್ತೆ ಕರ್ನಾಟಕದ ಪಠ್ಯಪುಸ್ತಕದಲ್ಲಿ ಇನ್ನು ಮುಂದೆ ತುಳುನಾಡ ಚರಿತ್ರೆ, ರಾಣಿ ಅಬ್ಬಕ್ಕ ಸೇರಿದಂತೆ ತುಳುನಾಡನ್ನು ಆಳಿದ ರಾಜವಂಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಕೈ ಸೇರುವ ನಿರೀಕ್ಷೆ ಇದೆ.

ತುಳು ಭಾಷೆಯ ಸಾಹಿತ್ಯ, ಅಲ್ಲಿನ ಧಾರ್ಮಿಕ- ಸಾಂಸ್ಕøತಿಕ ಆಚರನೆಗಳು, ಜನರ ಜೀವನಕ್ರಮ ಹೀಗೆ ಎಲ್ಲವೂ ವಿಭಿನ್ನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಮುಂಬಯಿ ಸೇರಿದಂತೆ ದೇಶಾದ್ಯಂತ ತುಳು ಜನರಿದ್ದಾರೆ. ಪ್ರಾಚೀನ ಇತಿಹಾಸದಲ್ಲಿ ಈ ಭೂಭಾಗಕ್ಕೆ ತುಳುನಾಡು ಎನ್ನುವ ಕಲ್ಪನೆ ಇದ್ದು, ತುಳುನಾಡಿಗೆ ತನ್ನದೇ ಆದ ರಾಜಕೀಯ, ಸಾಂಸ್ಕೃತಿಕ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡುವ ಕೆಲಸವಾಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ಈಗ ಶಿಕ್ಷಣ ಇಲಾಖೆ ಪೂರಕವಾಗಿ ಸ್ಪಂದಿಸುವ ಕೆಲಸ ಮಾಡಿದೆ.

Also Read  ಕಾರಾಗೃಹದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ

2020-21ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಪಟ್ಟಂತೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಜತೆಯಲ್ಲಿ ಮುದ್ರಕರಿಗೆ ಕಾರ್ಯಾದೇಶ ಹಾಗೂ ಮುದ್ರಣಕ್ಕೆ ಬೇಕಾಗುವ ಸಿಡಿ ನೀಡುವ ಹಂತದಲ್ಲಿರುವುದರಿಂದ 2020-21ನೇ ಸಾಲಿನ ಪಠ್ಯಕ್ರಮ ಅಂತಿಮಗೊಳಿಸಲಾಗಿರುವುದರಿಂದ ಮುಂದಿನ ವರ್ಷಗಳಲ್ಲಿ ಪಠ್ಯಪುಸ್ತಕಗಳು ಪುನರ್‌ ರಚನೆಯಾಗುವ ಸಂದರ್ಭ ರಚನಾ ಸಮಿತಿಯರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.


ಕರ್ನಾಟಕದ ಮುಖ್ಯ ಭಾಗವಾಗಿರುವ ತುಳುನಾಡಿನ ಇತಿಹಾಸವನ್ನು ಕದಂಬರ, ಚಾಲುಕ್ಯರ ಮತ್ತು ಇತರ ಆಳ್ವಿಕೆ ಕಾಲದಲ್ಲಿ ತುಳುನಾಡಿನಲ್ಲಿ ಆಳುಪರ ಆಳ್ವಿಕೆ, ಇಲ್ಲಿನ ಆಡಳಿತ, ಐತಿಹಾಸಿಕ, ಧಾರ್ಮಿಕ ಸ್ಥಳಗಳು, ಪುರಾತನ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು, ತುಳುನಾಡಿನ ವಿಶಿಷ್ಟ ಮಾತೃ ಪ್ರಧಾನ ವ್ಯವಸ್ಥೆ ಹಾಗೂ ರಾಣಿ ಅಬ್ಬಕ್ಕ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು.

ಈಗಾಗಲೇ ತುಳುವನ್ನು ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆ ಬರೆಯುವ ಹಂತಕ್ಕೆ ಮುಟ್ಟಿಸುವ ಕೆಲಸವಾಗಿದೆ. ಇದರ ಜತೆಯಲ್ಲಿ ಪದವಿ, ಸ್ನಾತಕೋತ್ತರಕ್ಕೂ ತುಳು ತಲುಪಿದೆ. ಪಠ್ಯ ಪುಸ್ತಕದಲ್ಲಿ ತುಳುನಾಡಿನ ಕುರಿತು ಮಾಹಿತಿ ನೀಡುವ ಅಧ್ಯಾಯಗಳು ಬಂದರೆ ಅದು ವಿಶಾಲ ಕರ್ನಾಟಕಕ್ಕೆ ತುಳುನಾಡಿನ ಪರಿಚಯವಾಗುತ್ತದೆ. ಇದಕ್ಕೆ ಬೇಕಾದ ಮಾಹಿತಿಗಳ ಸಂಗ್ರಹ ಮಾಡಿಕೊಡುವ ಜತೆಗೆ ಪೂರ್ಣ ಪಠ್ಯಕ್ಕೆ ಬೇಕಾಗುವ ವಿಚಾರಗಳನ್ನು ಮಾಡಿಕೊಡುವ ಕೆಲಸವನ್ನು ಕೂಡ ಅಕಾಡೆಮಿ ಮಾಡಿಕೊಡುತ್ತದೆ. ಆದರೆ ಅದಕ್ಕೊಂದು ಅವಕಾಶ ಮಾತ್ರ ಸಿಗಬೇಕು.ಎಂದು ದಯಾನಂದ ಜಿ. ಕತ್ತಲ್‌ಸಾರ್‌, ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ತಿಳಿಸಿದ್ದಾರೆ.

Also Read  ಉಡುಪಿಯಲ್ಲಿ ಮುಂದುವರಿದ ಧಾರಕಾರ ಮಳೆ ➤ ಎಲ್ಲೆಡೆ ಹಲವಾರು ಮನೆಗಳು ಜಲಾವೃತ

error: Content is protected !!
Scroll to Top