ಉಡುಪಿ ಜುಲೈ 31ರ ತನಕ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಭಾಗ್ಯವಿಲ್ಲ

(ನ್ಯೂಸ್ ಕಡಬ) newskadaba.com.ಉಡುಪಿ,ಜು. 03 :ಕೊರೊನಾ ತನ್ನ ನಾಗಾಲೋಟ ಇದೇ ರೀತಿ ಮುಂದುವರಿಸುತ್ತಿದ್ದರೆ. ಇತ್ತ ಕೃಷ್ಣನ ದರ್ಶನವು ಮುಂದೂಡಲ್ಪಡುತ್ತಿದೆ. ಜುಲೈ 31ರ ತನಕ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಭಕ್ತರು ಹಾಗೂ ಕೃಷ್ಣ ಮಠದ ಸಿಬ್ಬಂದಿಗಳ ಆರೋಗ್ಯದ ಈ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.


ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಭಕ್ತರ ಮತ್ತು ಕೃಷ್ಣಮಠದ ಸಿಬ್ಬಂದಿ ಆರೋಗ್ಯ ಮುಖ್ಯ. ಕೃಷ್ಣಮಠದಲ್ಲಿ ಬಹಳ ಹಿಂದಿನಿಂದ ಯತಿಗಳೇ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯ ಇದೆ ಕೃಷ್ಣ ಮಠದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಠದಲ್ಲಿಯೂ ದೇಶದ ಒಳಿತಿಗಾಗಿ ಪೂಜೆ, ಪ್ರಾರ್ಥನೆ ನಡೆಯಲಿವೆ ಎಂದರು. ರಾಜ್ಯದ ಹಲವಾರು ದೇವಾಲಯಗಳಲ್ಲಿ ಜುಲೈ 31ರ ತನಕ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.

Also Read  ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

error: Content is protected !!
Scroll to Top