ಅರಂತೋಡಿನಲ್ಲಿ ಕಾಂಗ್ರೆಸ್ ಪ್ರತಿಜ್ಞಾ ಸಭೆ

(ನ್ಯೂಸ್ ಕಡಬ)newskadaba.com ಜು.02, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಮತ್ತು ಈಶ್ವರ ಖಂಡ್ರೆರವರ ಪದಗ್ರಹಣ ಸಮಾರಂಭದ ಪ್ರತಿಜ್ಞಾ ಕಾರ್ಯಕ್ರಮ ಅರಂತೋಡು ವಲಯ ಕಾಂಗ್ರೆಸ್ ವತಿಯಿಂದ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ರಾದ ಜನಾರ್ದನ ಅಡ್ಕಬಳೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ಮುಖಂಡ ತೀರ್ಥರಾಮ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಅರಂತೋಡು ಕ್ಷೇತ್ರದ ಉಸ್ತುವಾರಿ ಗೀತಾ ಕೋಲ್ಚಾರ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಅಧ್ಯಕ್ಷ ಕೇಶವ ಕೊಳಲುಮೂಲೆ, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರವಿ ಪೂಜಾರಿ ತೊಡಿಕಾನ, ಇದ್ದೀನ್ ಕುಂಞ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಣ್ಣದೊರೆ ಅಡ್ಯಡ್ಕ ಸ್ವಾಗತಿಸಿ, ತಿಮ್ಮಯ್ಯ ವಂದಿಸಿ ತಾಜುದ್ದೀನ್ ನಿರೂಪಣೆಗೈದರು.

Also Read  ಮಕ್ಕಳಿಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ತಾಯಿ ➤ ಓರ್ವ ಮಗು ಮೃತ್ಯು

error: Content is protected !!
Scroll to Top