ಮಾಸ್ಕ್ ಧರಿಸದೆ ಓಡಾಟ ನಡೆಸಿದರೆ ಹುಷಾರ್! ➤ ಕಟ್ಟಬೇಕಾದಿತು ದಂಡ

(ನ್ಯೂಸ್ ಕಡಬ) newskadaba.com.ಉಡುಪಿ,ಜು.2:ಕೊರೊನಾ ತಡೆಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಪಾಲನೆಗೆ ಸಂಬಂಧಿಸಿ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುವವರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡು ವಂತೆ ಅಧಿಕಾರಿ ಗಳು, ಕೊರೊನಾ ವಾರಿಯರ್ಸ್‌ ತಂಡ, ಆರೋಗ್ಯ ಇಲಾಖೆ, ಪೊಲೀಸರು ಜಾಗೃತಿ ಮೂಡಿಸಿದರೂ.

ನಗರದಲ್ಲಿ ಮಾಸ್ಕ್ ಸಹಿತ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿ ನಗರಸಭೆ ಅಧಿಕಾರಿಗಳು ಮುಖ್ಯ ಪೇಟೆಯಲ್ಲಿ ಬುಧವಾರ ದಾಳಿ ನಡೆಸಿದರು. ನಿಟ್ಟೂರು, ನಗರ ಬಸ್‌ ಸ್ಟಾಂಡ್‌ ಮುಂತಾದ ಕಡೆ ಬೆಳಗ್ಗೆ ವಲಸೆ ಕಾರ್ಮಿಕರು ಮಾಸ್ಕ್ ಧರಿಸದೆ ಕೆಲಸಕ್ಕೆ ಹೊರಟಿದ್ದರು. ಅವರನ್ನು ತಡೆದ ನಗರಸಭೆ ಅಧಿಕಾರಿಗಳು ಕಾರ್ಮಿಕರನ್ನು ವಾಪಸ್‌ ಮನೆಗಳಿಗೆ ಕಳುಹಿಸಿ, ಮಾಸ್ಕ್ ಧರಿಸಿಯೇ ಮನೆಯಿಂದ ಹೊರ ಬರುವಂತೆ ಸೂಚಿಸಿದರು. ನಗರದಲ್ಲಿ ಬುಧವಾರ ಮಾಸ್ಕ್ ಧರಿಸದ 4 ಮಂದಿಯಿಂದ 400 ರೂ. ದಂಡ ಸಂಗ್ರಹಿಸಲಾಗಿದೆ.

Also Read  ಶಾಲಾ ವಾಹನದ ಚಕ್ರ ಹರಿದು ವಿದ್ಯಾರ್ಥಿ ಕಾಲು ಜಖಂ

ಕಾರ್ಕಳ ನಗರ ಪೊಲೀಸ್‌ ಠಾಣೆ ಪೊಲೀಸರು ಬುಧವಾರ ಕೂಡ ಜಾಗೃತಿ ನಡೆಸಿದರು. ಚೆಕ್‌ಪೋಸ್ಟ್‌ಗಳನ್ನು ತೆರೆದು ಅರಿವು ಮೂಡಿಸಿದರು. ಆನೆಕೆರೆ, ಮಾರುಕಟ್ಟೆ, ಅನಂತಶಯನ ಮೊದಲಾದ ಕಡೆಗಳಲ್ಲಿ ಪೊಲೀಸರು ಮಾಸ್ಕ್ ಧರಿಸುವಂತೆ ತಿಳಿವಳಿಕೆ ನೀಡಿದರು.

 

error: Content is protected !!
Scroll to Top