ಕಾರವಾರ ಮದುವೆಯಾಗಿ ಐದೇ ದಿನಕ್ಕೆ ವರ ಕೊರೊನಾಗೆ ಬಲಿ

(ನ್ಯೂಸ್ ಕಡಬ) newskadaba.com.ಕಾರವಾರ,ಜು .1: ಸಪ್ತಪದಿ ತುಳಿದು ಐದೇ ದಿನಕ್ಕೆ ನವ ವರ ಕೊರೊನಾಗೆ ಬಳಿಯಾದ ಘಟನೆ ಕಾರವಾರದಲ್ಲಿ ನಡೆದಿದೆ. ಇದರಿಂದಾಗಿ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 100 ಜನರ ಪೈಕಿ 20 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ ಹಲವರ ಪರೀಕ್ಷಾ ವರದಿ ಇನ್ನಷ್ಟೆ ಬರಬೇಕಾಗಿದೆ.

ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ಮಂಗಳೂರು ಮೂಲದ ಯುವಕನ ಮದುವೆ ಜೂ.25ರಂದು ಭಟ್ಕಳದಲ್ಲಿ ಇಲ್ಲಿನ ಯುವತಿಯೊಬ್ಬಳ ಜತೆ ನೆರವೇರಿತ್ತು. ಈ ಮದುವೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ವರನ ಕುಟುಂಬಸ್ಥರು ಮಂಗಳೂರಿನಲ್ಲಿದ್ದರು. ಮದುವೆ ಹಿನ್ನೆಲೆ ಜೂ.22ರಂದು ಭಟ್ಕಳಕ್ಕೆ ಬಂದಿದ್ದ. 25ರಂದು ಮದುವೆ ಮುಗಿಯುತ್ತಿದ್ದಂತೆ ಮಂಗಳೂರಿನಲ್ಲಿರುವ ಮನೆಗೆ ವಧು-ವರ ಹಾಗೂ ಕುಟುಂಬಸ್ಥರು ತೆರಳಿದ್ದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 26ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ. 30ರಂದು ಮೃತಪಟ್ಟಿದ್ದಾನೆ.

Also Read  ಅನಿಲ ಸೋರಿಕೆಯಿಂದಾಗಿ 9 ಮಂದಿ ಮೃತ್ಯು, 10 ಜನರು ಅಸ್ವಸ್ಥರಾಗಿದ್ದಾರೆ..!

ಮದುವೆಗೆ ತೆರಳಿದ್ದ 100ಕ್ಕೂ ಅಧಿಕ ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ಹಲವರ ವರದಿ ಬರಬೇಕಿದೆ. ಸದ್ಯಕ್ಕೆ ವರದಿ ಬಂದವರ ಪೈಕಿ 20 ಜನರಿಗೆ ಕರೊನಾ ಸೋಂಕು ಇರುವುದು ಗೊತ್ತಾಗಿದೆ. ಹಾಗಾಗಿ ಮದುವೆಗೆ ಹೋದರಲ್ಲಿ ಆತಂಕ ಹೆಚ್ಚಾಗಿದೆ.

error: Content is protected !!
Scroll to Top