ಬಜ್ಪೆಯಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೂ ಕೋವಿಡ್ ಪಾಸಿಟಿವ್ ➤ ಪೋಲಿಸ್ ಠಾಣೆ ಸೀಲ್ ಡೌನ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು.1, ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೆ ಕೊರೋನ ಸೋಂಕು ತಗುಲಿರುವುದು ಖಚಿತವಾಗಿದೆ.

ಬಜ್ಪೆಯ ನಿವಾಸಿಗಳಾದ 34 ಹಾಗೂ 26 ವರ್ಷದ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ದನ ಕಳವಿಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಇವರನ್ನು ಬಜ್ಪೆ ಪೊಲೀಸರು ಮಂಗಳವಾರ ಬಂಧಿಸಿದ್ದರು. ಬಳಿಕ ವೈದ್ಯರಲ್ಲಿ ಕೊವೀಡ್ ಪರೀಕ್ಷೆಗೆ ಕರೆದೊಯ್ದಿದ್ದರು. ಈ ವರದಿ ಬಂದಿದ್ದು, ಕೊರೋನ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಆರೋಪಿಗಳನ್ನು ಬಂಧಿಸಿದ್ದ ಎಂಟು ಪೊಲೀಸರಿಗೂ ಸೋಂಕು ತಗುಲಿರುವ ಸಾಧ್ಯತೆಯ ಹಿನ್ನೆಲೆ ಎಲ್ಲರ ಗಂಟಲ ದ್ರವವನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಜ್ಪೆ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Also Read  KSRTC ಬಸ್​ನಲ್ಲಿ ದಾಖಲೆ ಇಲ್ಲದೇ ಅಕ್ರಮವಾಗಿ ಲಕ್ಷ ಲಕ್ಷ ಹಣ ಸಾಗಾಟ!!

error: Content is protected !!
Scroll to Top