(ನ್ಯೂಸ್ ಕಡಬ) newskadaba.com.ಮಂಗಳೂರು , ಜು.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತನ್ನ ವರಸೆಯನ್ನು ಬದಲಾಯಿಸುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಇದುವರೆಗೆ ಹೊರರಾಜ್ಯ, ವಿದೇಶಗಳಿಂದ ಬಂದವರಿಗೆ ಹೆಚ್ಚು ಪ್ರಕರಣಗಳು ಕಂಡುಬರುತ್ತಿದೆ. ಕೆಲದಿನಗಳಿಂದ ಸ್ಥಳೀಯವಾಗಿ ಸಂಪರ್ಕಹರಡುತ್ತಿರುವುದು ಹೆಚ್ಚಳವಾಗಿದೆ.
ಮಂಗಳವಾರ ಒಂದೇ ದಿನ ಎಂಟು ವೈದ್ಯರು ಮತ್ತು ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಇವರೂ ಸೇರಿ ಜಿಲ್ಲೆಯಲ್ಲಿ 44 ಮಂದಿಗೆ ಸೋಂಕು ದೃಢವಾಗಿದೆ. ಕಳೆದ ಕೆಲದಿನಗಳಿಂದ ಮಂಗಳೂರು ಹಾಗೂ ಉಳ್ಳಾಲ ಪರಿಸರದಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಲಾಗುತ್ತಿದ್ದು ಅದರಲ್ಲಿ ಒಂದು ಪಾಸಿಟಿವ್ ಕೇಸ್ ಸಿಕ್ಕಿದ್ದು. ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ.
ನಿನ್ನೆ ಮಂಗಳೂರಿನ ಕೊಡಿಯಾಲ್‌ಬೈಲ್‌ನ ರೆಸ್ಟೋರೆಂಟ್‌ವೊಂದರ ಮಾಲೀಕರಿಗೆ ಪಾಸಿಟಿವ್ ಬಂದಿದ್ದು, ಕಾಲು ನೋವಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಬಜ್ಪೆ ಠಾಣೆ ವ್ಯಾಪ್ತಿಯ ಕುಪ್ಪೆಪದವು ಆಚಾರಿಜೋರದ 58 ವರ್ಷದ ಮಹಿಳೆಗೆ ಪಾಸಿಟಿವ್ ಪತ್ತೆಯಾಗಿದೆ ಗೂಡ್ಸ್ ಲಾರಿ ಚಾಲಕನಾಗಿರುವ ಪುತ್ತೂರು ನಗರಸಭಾ ವ್ಯಾಪ್ತಿಯ ಚಿಕ್ಕಪುತ್ತೂರಿನ 30 ವರ್ಷದ ಯುವಕ, ಮೈಸೂರಿನಲ್ಲಿ ಉದ್ಯೋಗಿಯಾಗಿದ್ದು ಎರಡು ತಿಂಗಳ ಹಿಂದೆ ಮರಳಿದ್ದ ಕಬಕ ಗ್ರಾಮದ ಮುರ ನಿವಾಸಿ 26 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ನರ್ಸ್ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ. ವೈದ್ಯರಿಗೆ ಸೋಂಕಿತ ರೋಗಿಗಳು ಬರುತ್ತಿರುವುದರಿಂದ ಅವರಿಗೂ ಬರುತ್ತಿರುವುದು ವರದಿಯಾಗಿದೆ, ಇವರೊಂದಿಗೆ ಪೊಲೀಸರಿಗೂ ಕೊರೊನಾ ಕಾಟ ಮುಂದುವರಿದಿದೆ.