ಸುಳ್ಯ ರೈತ ಕಾಯಿದೆ ವಿರೋಧಿಸಿ ರೈತ ಸಂಘದ ಪ್ರತಿಭಟನೆ ➤ ಸಂಸತ್‍ಗೆ ಮುತ್ತಿಗೆ ಹಾಕುದಾಗಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com.ಸುಳ್ಯ,ಜೂ.30: ಭೂ ಸುಧಾರಣಾ ಕಾಯಿದೆ ತಿದ್ದುಪಡಿ, ಎಪಿಎಂಸಿ. ಕಾಯಿದೆ, ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಗೊಳಿಸುವುದು ಮತ್ತು ಸಹಕಾರಿ ಬ್ಯಾಂಕ್‍ಗಳನ್ನು ಆರ್‍ಬಿಐ ವ್ಯಾಪ್ತಿಗೆ ತರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ಸೋಮವಾರದಂದು ನಡೆಯಿತು.


ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿಕಿರಣ ಪುನಚ ಇಂದಿನ ದಿನದಲ್ಲಿ ಸರಕಾರಗಳು ರೈತ ವಿರೋಧಿ ನೀತಿಯನ್ನು ಮಾಡುತ್ತಿದೆ ತಮಗಿಷ್ಟ ಬಂದಂತೆ ಸುಗ್ರಿವಾಜ್ಞೆಗಳನ್ನು ಹೊರಡಿಸುತ್ತಿದೆ.ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಭೂಮಿಯನ್ನು ಬಂಡವಾಳ ಶಾಹಿಗಳ ಪಾಲಿಗೆ ವರವಾಗುವಂತೆ ಮಾಡಿ ರೈತರನ್ನು ಬೀದಿಗೆ ಬರುವಂತೆ ಮಾಡುವ ಕಾರ್ಯವಿದು ಈ ಎಲ್ಲಾ ರೈತ ವಿರೋಧಿ ಆದೇಶಗಳನ್ನು ಹಿಂಪಡೆಯದೆ ಇದ್ದರೆ ರೈತ ಸಂಘ ಹೋರಾಟ ಮಾಡಲಿದೆ. ಸಂಸತ್‍ಗೂ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

Also Read  ಕಂದ್ರಪ್ಪಾಡಿ ಅಂಚೆ ಕಛೇರಿ ಕಟ್ಟಡಕ್ಕೆ ತಾತ್ಕಾಲಿಕ ದುರಸ್ಥಿ


ಜೆಡಿಎಸ್ ರಾಜ್ಯ ಉಪಾಧಕ್ಷ ಎಂ.ಬಿ.ಸದಾಶಿವ, ಆಮ್ ಆದ್ಮಿ ಪಕ್ಷದ ಸಂಚಾಲಕ ಅಶೋಕ್ ಎಡಮಲೆ ಸರ್ಕಾರದ ನೀತಿಯ ವಿರುದ್ದ ಮತನಾಡಿ ಯಾವುದೇ ಕಾನೂನು ತರುವ ಮುಂಚೆ ಅದರ ಸಾಧಕ-ಬಾಧಕಗಳನ್ನು ತಿಳಿದುಕೊಳ್ಳಬೇಕು ಎಂದರು ನಂತರ ತಹಶೀಲ್ದಾರ್ ಮೂಲಕ ತಿದ್ದುಪಡಿ ಕಾಯ್ದೆಗೆ ರೈತರ ಆಕ್ಷೇಪನಾ ಮನವಿಯನ್ನು ಸರಕಾರಕ್ಕೆ ಸಲ್ಲಿಸಿದರು ಈ ಸಂದರ್ಭ ರೈತ ಸಂಘದ ಪ್ರಮುಖರಾದ ಲೋಲಜಾಕ್ಷ ಭೂತಕಲ್ಲು ತೀರ್ಥರಾಮ ನೆಡ್ಚಿಲ್, ತೀರ್ಥರಾಮ ಪರ್ನೋಜಿ, ದಿವಕರ ಪೈ, ಲೋಕಯ್ಯ ಅತ್ಯಾಡಿ, ಮಂಜುನಾಥ ಮಡ್ತಿಲ ಜೊತೆಗಿದ್ದರು.

Also Read  ಕುಮಾರಧಾರ ಯುವಕ ಮಂಡಲ ► ಪಿಜಕ್ಕಳ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ

error: Content is protected !!
Scroll to Top