(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.30, ಡಾ.ಪಿ.ದಯಾನಂದ ಪೈ, ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ “ಬಿಸಿನೆಸ್ ಲ್ಯಾಬ್”ನ್ನು ಪ್ರಾರಂಭಿಸುವ ಕುರಿತು ಜೂನ್ 26 ರಂದು, ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ, ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿತ್ತು.
ವರ್ಲ್ಡ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿ ಸಲಹೆಗಾರರು ಆಗಿರುವ ಪ್ರೊ. ಗುರುರಾಜ ಭಟ್ ಇವರು “ಬಿಸಿನೆಸ್ ಲ್ಯಾಬ್”ನ ಆಶ್ರಯದಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಲೈಬ್ರರಿ, ಇ-ಲೈಬ್ರರಿ, ಸಂಶೋಧನಾ ಇನ್ಯುಕುಬೇಟರ್ ಉದ್ಯಮಶೀಲತೆ ಅಭಿವದ್ಧಿ (Entrepreneurship) ಫ್ಯಾಕಲ್ಟಿ ತರಬೇತಿ, ಸಂಶೋಧನಾ ಕೇಂದ್ರ ಹೊಂದುವಿಕೆ ಮುಂತಾದ ಯೋಜನೆಗಳನ್ನು ಸರ್ಕಾರಿ, ಅರೆಸರ್ಕಾರಿ ಹಾಗೂ ಸಿ.ಎಸ್.ಆರ್ ನಿಧಿಯಿಂದ ಪ್ರಾರಂಭಿಸುವ ಕುರಿತು ವಿಸ್ತೃತ ವಿವರ ನೀಡಿದರು.
ಈ ನಿಟ್ಟಿನಲ್ಲಿ ಹೊಂದಾಣಿಕೆ ಅನುದಾನ (Matching Grant)ಪಡೆಯುವ ಬಗ್ಗೆ ಹಾಗೂ ಕೈಗಾರಿಕೆ, ಇ-ಗ್ರಂಥಾಲಯ, ಮಾನವ ಸಂಪನ್ಮೂಲ ಸಂಸ್ಥೆಗಳೊಂದಿಗೆ ಮೆಮೊರಾಂಡಮ್ ಆಫ್ ಅಂಡರ್‍ಸ್ಟಾಂಡಿಗ್ (MOU) ನ್ನು ಮಾಡಿಕೊಳ್ಳುವಲ್ಲಿ ಕಾರ್ಯ ಪ್ರವೃತ್ತರಾಗುವತ್ತ ಸಭೆಯಲ್ಲಿ ಚರ್ಚಿಸಲಾಯಿತು.
ಕಾಲೇಜಿನ ಬೇಡಿಕೆ ಪ್ರಕಾರ ಪ್ರತ್ಯೇಕ ಬಿಸಿನೆಸ್ ಲ್ಯಾಬ್ ಯೋಜನೆಯನ್ನು ತಯಾರಿಸಿ ಈ ಬಗ್ಗೆ ಕಾರ್ಯ ಪ್ರವೃತ್ತರಾಗುವತ್ತ ಹಾಗೂ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಗುರುರಾಜ್ ಭಟ್ ಅವರು ಆಶ್ವಾಸನೆ ನೀಡಿದರು. ಎಸ್ ಆ್ಯಂಡ್ ಎಸ್ ಸಂಸ್ಥೆಯ ಅಧಿಕಾರಿ ಸರೋಜ್ ರೈ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಶಿವರಾಮ ಪಿ, ಡಾ.ಜಯಕರ ಭಂಡಾರಿ, ಡಾ.ನಾಗಪ್ಪ ಗೌಡ, ಡಾ.ಪ್ರಕಾಶ ಚಂದ್ರ, ಡಾ.ಶೈಲಾರಾಣಿ ಬಿ, ಪ್ರೊ. ತ್ರಿಶಾಂತ್ ಹಾಗೂ ಪ್ರೊ. ನಯನ ಕುಮಾರಿ ಭಾಗವಹಿಸಿದ್ದರು.
ಜೂನ್ 26 ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನವಾಗಿದ್ದು, ಪ್ರಾಂಶುಪಾಲರು ಉಪನ್ಯಾಸಕರುಗಳಿಗೆ ಮಾದಕ ದ್ರವ್ಯ ಸೇವನೆಯ ಪರಿಣಾಮ ಹಾಗೂ ಇದರಿಂದ ಉಂಟಾಗುವ ಹಾನಿ ಬಗ್ಗೆ ವಿವರಿಸಿದರು. ಅಲ್ಲದೆ ತರಗತಿ ಉಪನ್ಯಾಸಕರು ತಮ್ಮ ತರಗತಿಯ ವಾಟ್ಸಪ್ ಗ್ರೂಪ್‍ಗಳಲ್ಲಿ ಈ ಬಗ್ಗೆ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಲು ತಿಳಿಸಿದರು.