ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕರ ಮೇಲೆ ಉದ್ಯಮಿಯಿಂದ ಹಲ್ಲೆ

ಕಡಬ, ಜೂ.29. ರಸ್ತೆಯಲ್ಲಿ ವಾಹನ ನಿಲ್ಲಿಸಿದ ವಿಚಾರದಲ್ಲಿ ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕರೋರ್ವರಿಗೆ ಉದ್ಯಮಿಯೋರ್ವರು ಹಲ್ಲೆ ನಡೆಸಿರುವ ಘಟನೆ ಕಡಬದ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಕಾಲೇಜು ಮುಂಭಾಗದಲ್ಲಿ ಸೋಮವಾರ ಸಂಜೆ ನಡೆದಿದೆ.

ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಸತೀಶ್ ನಾಯ್ಕ್ ಮೇಲಿನಮನೆ ಸೋಮವಾರ ಸಂಜೆ ತನ್ನ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಡಬ ಜುವಾನ ಇಂಡಸ್ಟ್ರೀಸ್ ಬಳಿ ರಸ್ತೆಯಲ್ಲಿ ವಾಹನವೊಂದು ಅಡ್ಡ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ ವಾಹನ ತೆಗೆಯುವಂತೆ ಸತೀಶ್ ಅವರು ಜುವಾನ ಇಂಡಸ್ಟ್ರೀಸ್ ನ ಮಾಲಕ ಬೋಸ್ಕೋ ಎಂಬವರಲ್ಲಿ ತಿಳಿಸಿದಾಗ ಅದು ತನ್ನ ಗ್ರಾಹಕರ ವಾಹನವಾಗಿದ್ದು, ತೆಗೆಯದಿದ್ದರೆ ಏನು ಮಾಡುತ್ತಿಯಾ ಎಂದು ಪ್ರಶ್ನಿಸಿ ಉದ್ಯಮಿ ಬೊಸ್ಕೋರವರು ಸತೀಶ್ ನಾಯ್ಕ್ ಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಗೊಂಡಿರುವ ಸತೀಶ್ ನಾಯ್ಕ್ ಕಡಬ ಸಮುದಾಯ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಡಬ ಪೊಲೀಸರು ಬೋಸ್ಕೋರವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.

Also Read  ಕರ್ನಾಟಕ ವಿಶೇಷ ಒಲಿಂಪಿಕ್ಸ್ ವತಿಯಿಂದ ► ರಾಜ್ಯ ಕ್ರೀಡಾ ತರಬೇತುದಾರ ಪ್ರಭಾಕರ್ ಮರ್ಕಂಜರವರಿಗೆ ಸನ್ಮಾನ

error: Content is protected !!
Scroll to Top