ಸುಬ್ರಹ್ಮಣ್ಯ ಪೆಟ್ರೋಲ್ ಪಂಪ್‍ಗೆ ಬಂದ ಮೊಸಳೆ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಜೂ.29: ಇಲ್ಲಿನ ಪೆಟ್ರೋಲ್ ಪಂಪ್ ಒಂದರಲ್ಲಿ ರಾತ್ರಿ ವೇಳೆ ಮೊಸಳೆ ಮರಿಯೊಂದು ಸ್ಥಳೀಯರ ಕಣ್ಣಿಗೆ ಬಿದ್ದು ನಾಪತ್ತೆಯಾಗಿರುವುದು ವರದಿಯಾಗಿದೆ.


ಕುಮಾರಧಾರ ನದಿ ಸಮೀಪವಿರುವ ಪೆಟ್ರೋಲ್ ಪಂಪ್‍ನ ಬದಿಯಲ್ಲಿ ಪ್ರತ್ಯಕ್ಷಗೊಂಡ ಮೊಸಳೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬರುವ ಮೊದಲೇ ಮೊಸಳೆ ಮೆಲ್ಲನೆ ಪಲಾಯನಗೊಂಡಿತು.


ಸುಬ್ರಹ್ಮಣ್ಯ ಪರಿಸರದಲ್ಲಿ ಎರಡು ವಾರಗಳ ಹಿಂದೆ ಜಿಂಕೆಗಳು ಕಂಡುಬಂದಿದ್ದವು ಇದೀಗ ಮೊಸಳೆ ಕಾಣಸಿಕ್ಕಿದೆ. ಕುಮಾರಧಾರ ನದಿ ದಟ್ಟಾರಣ್ಯದಲ್ಲಿ ಹರಿದುಬರುತ್ತಿದ್ದು, ಹೀಗಾಗಿ ಮೊಸಳೆ ನೀರಿನಲ್ಲಿ ಹರಿದು ಬಂದಿರಬಹುದೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Also Read  “ಜೀವನದಲ್ಲಿ ಗುರಿಯನ್ನು ಸಾಧಿಸುವ ಛಲದೊಂದಿಗೆ ಮುನ್ನಡೆಯಿರಿ“ ➤ ಡಾ. ಅಮಿತಾಬ್ ಆನಂದ್

error: Content is protected !!
Scroll to Top