(ನ್ಯೂಸ್ ಕಡಬ) newskadaba.com.ಕಾಸರಗೋಡು,ಜೂ.28: ಕೊರೊನಾದಿಂದಾಗಿ ಬಸ್‍ಗಳಲ್ಲಿ ಪ್ರಯಾಣಿಕರಿಲ್ಲದೆ ಅದೆಷ್ಟೊ ಖಾಸಗಿ ಬಸ್‍ಗಳು ಸಂಚಾರ ನಿಲ್ಲಿಸಿದೆ. ಇದರಿಂದ ಕಷ್ಟನುಭವಿಸುತ್ತಿರುವವರು ಮಾತ್ರ ಚಾಲಕರು ಮತ್ತು ನಿರ್ವಾಹಕರು ಆದರೆ ಕಾಸರಗೋಡಿನಲ್ಲಿ ಬಸ್‌ನ ಕಾರ್ಮಿಕರು ಉಪ ಜೀವನಕ್ಕಾಗಿ ಹೊಸ ಮಾರ್ಗವನ್ನು ಅನುಸರಿಸತೊಡಗಿದ್ದಾರೆ.
ಕಾಸರಗೋಡು-ಕಣ್ಣೂರು ರೂಟ್‌ನಲ್ಲಿ ಸಂಚರಿಸುವ ಸೂಪರ್ ಫಾಸ್ಟ್ ಬಸ್‌ನ ಸಿಬಂದಿ ಕಣ್ಣೂರಿನಿಂದ ಟಿ ಶರ್ಟ್ ಸಹಿತ ಬಟ್ಟೆ ಬರೆಗಳನ್ನು ಕಾಸರಗೋಡಿಗೆ ತಂದು ಬಸ್‌ನಲ್ಲೇ ಮಾರಾಟ ಮಾಡುತ್ತಿದ್ದಾರೆ.ಸಂಚಾರ ಪ್ರಾರಂಭಗೊಂಡರೂ ಜನ ಮಾತ್ರ ಬಸ್ ಹತ್ತಲು ಸ್ವಲ್ಲ ಹಿಂಜರಿತಿದ್ದಾರೆ. ಇದರಿಂದ ಬಸ್ ಡಿಸೇಲ್ ತುಂಬಲು ಕಷ್ಟವಾಗುತ್ತಿದೆ. ಸಿಕ್ಕ ಹಣದಲ್ಲಿ ಕೆಲವೊಮ್ಮೆ ಆಹಾರಕ್ಕೂ, ನಿತ್ಯ ಖರ್ಚಿಗೂ ಹಣ ಲಭಿಸುತ್ತಿಲ್ಲ. ಆದರಿಂದ ಬಟ್ಟೆ ಬರೆಗಳನ್ನು ಮಾರಾಟ ನಡೆಸಿ ಖರ್ಚಿಗೆ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿರುವುದಾಗಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.