ರಾಜ್ಯದಲ್ಲಿ ನಿಲ್ಲದ ಕೊರೋನಾ ಆರ್ಭಟ ➤ ನಾಳೆ ರಾತ್ರಿಯಿಂದ ರಾಜ್ಯಾದ್ಯಂತ ಕರ್ಫ್ಯೂ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 27, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಬಳಿಕ ಬಳಿಕ ಗಟ್ಟಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವುದನ್ನೇ ಸರ್ಕಾರ ಕಾಯುತ್ತಿದೆ, ಪರೀಕ್ಷೆ ಮುಗಿದ ಬಳಿಕ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ನಾಳೆಯಿಂದ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಾಗಲಿದೆ. ಜುಲೈ 5 ರಿಂದ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಆಗಲಿದೆ. ಆಟೋ, ಟ್ಯಾಕ್ಸ್, ಕ್ಯಾಬ್, ಬಸ್ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಜೊತೆಗೆ ಕೆಲ ನಿಯಮಗಳು ಅನ್ವಯವಾಗಲಿದೆ ಎಂದರು.

Also Read  ಪುತ್ತೂರು: ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ ➤ ಓರ್ವನಿಗೆ ಗಾಯ

error: Content is protected !!
Scroll to Top