ಪತ್ರಕರ್ತನಿಗೂ ವಕ್ಕರಿಸಿದ ಕೊರೋನಾ ➤ ಪ್ರೆಸ್ ಕ್ಲಬ್ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.27, ರಾಷ್ಟ್ರೀಯ ಸುದ್ದಿವಾಹಿನಿಯ ವರದಿಗಾರರೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದರಿಂದಾಗಿ ಅವರು ಭೇಟಿ ನೀಡಿದ್ದ ಪ್ರೆಸ್ ಕ್ಲಬ್ ಗೆ ಸೀಲ್ ಡೌನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ನೃತತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನಿ ಕಾರ್ಯದರ್ಶಿ ಕಚೇರಿಯಲ್ಲಿ ನಡೆದಿದ್ದ ಡಿಜಿ ಐಜಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೊರೋನಾ ಸೋಂಕಿತ ಪತ್ರಕರ್ತ ಬಳಿಕ ಪ್ರೆಸ್ ಕ್ಲಬ್ ಗೆ ಹೋಗಿದ್ದ ಅವರು ಸುಮಾರು 1 ಗಂಟೆಗಳ ಕಾಲ ಅಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.

Also Read  ಮನೆಯೂಟ ಕೋರಿ ಅರ್ಜಿ ಸಲ್ಲಿಸಿದ ದರ್ಶನ್   ವಜಾಗೊಳಿಸಿದ ಕೋರ್ಟ್

ಪ್ರೆಸ್ ಕ್ಲಬ್ ನಿಂದ ಹೊರ ಬಂದ ಬಳಿಕ ಬಿಬಿಎಂಪಿಯಿಂದ ಪತ್ರಕರ್ತಗೆ ಕರೆ ಬಂದಿದ್ದು, ಕೊರೋನಾ ಪಾಸಿಟಿವ್ ಆಗಿರುವುದನ್ನು ತಿಳಿಸಲಾಗಿದೆ. ಕೂಡಲೇ ಪತ್ರಕರ್ತನ ಕುಟುಂಬವನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಈತನೊಂದಿಗೆ ಸಂಪರ್ಕ ಹೊಂದಿದವರೆಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

error: Content is protected !!
Scroll to Top