ಉಳ್ಳಾಲ ಕೊರೊನಾ ಅಟ್ಟಹಾಸ ರ್ಯಾಂಡಮ್ ಟೆಸ್ಟ್‍ಗೆ ನಿರ್ಧಾರ

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜೂ.27: ಉಳ್ಳಾಲದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ರ್ಯಾಂಡಮ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಉಳ್ಳಾದಲ್ಲಿ ವೃದ್ದೆ ಸಾವಿನ ಬಳಿಕ ಇಬ್ಬರು ಪೋಲಿಸ್ ಸಹಿತ ಐವರಿಗೆ ಕೊರೊನಾ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಸೋಂಕಿತ ಪ್ರದೇಶದಲ್ಲಿ ರ್ಯಾಂಡಮ್ ಪರೀಕ್ಷೆ ಮಾಡಲಾಗುದೆಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.


ಉಳ್ಳಾಲದ ಅಜಾದ್ ನಗರ, ಕೋಡಿ, ಬಂಗೇರ್ ಲೇನ್, ಪೊಲೀಸ್ ಠಾಣೆ, ಸಹರಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ರ್ಯಾಂಡಮ್ ಆಗಿ ಪರೀಕ್ಷೆ ನಡೆಸಲು ಸ್ಥಳೀಯ ಜನಪ್ರತಿನಿಧಿಗಳು,ಧಾರ್ಮಿಕ ಮುಖಂಡರ ಸಭೆಯ ನಂತರ ನಿರ್ಧರಿಸಲಾಗಿದೆ.

Also Read  ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಬಳಿ 15ನೇ ಶತಮಾನದ 3 ಸ್ಮಶಾನ ಪತ್ತೆ..!       


ಹಾಗೆಯೇ ಉಳ್ಳಾಲದ ಮೀನುಗಾರರು, ರಿಕ್ಷಾ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಸ್ಥರ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಸೋಂಕು ಹೆಚ್ಚುತ್ತಿರುವುದರಿಂದಾಗಿ ಉಳ್ಳಾಲದ ಹಲವು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಸ್ಥಗಿತ ಮಾಡುವಂತೆ ಧಾರ್ಮಿಕ ಕೇಂದ್ರಗಳ ಮುಖಂಡರ ಸಭೆ ನಡೆಸಿ ಖಾದರ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

error: Content is protected !!
Scroll to Top