ಉಪ್ಪಿನಂಗಡಿ: ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತ್ಯು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ: ವಿದ್ಯುತ್ ಆಘಾತಕ್ಕೊಳಗಾಗಿ ಕರ್ತವ್ಯದಲ್ಲಿದ್ದ ಮೆಸ್ಕಾಂ ಪವರ್ ಮ್ಯಾನ್ ಮೃತಪಟ್ಟ ಘಟನೆ ಕಲ್ಲೇರಿಯಲ್ಲಿ ನಡೆದಿದೆ.

ಮೃತರನ್ನು ಕಲ್ಲೇರಿ ಸೆಕ್ಷನ್‌ನ ಲೈನ್‌ಮ್ಯಾನ್ ವಿಜಾಪುರ ಮೂಲದ ಬಸವರಾಜ್ (26ವ) ಎಂದು ಗುರುತಿಸಲಾಗಿದೆ. ಕಲ್ಲೇರಿ ಸೆಕ್ಷನ್‌ನಲ್ಲಿ ಲೈನ್ ಆಫ್ ಮಾಡುವ ಸಂದರ್ಭ ಗ್ರೌಂಡ್ ಶಾರ್ಟ್ ಆಗಿ ವಿದ್ಯುತ್ ಆಘಾತಕ್ಕೊಳಗಾಗಿ ಮೈಮೇಲೆ ವಿದ್ಯುತ್ ಸಂಚಾರಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Scroll to Top