(ನ್ಯೂಸ್ ಕಡಬ) newskadaba.com.ಸುಳ್ಯ,ಜೂ.27:ಪ್ರಾಕೃತಿ ವಿಕೋಪಕ್ಕೆ ಸಿಲುಕಿ ತನ್ನ ಮನೆವರು ಮತ್ತು ಮನೆಯನ್ನೇ ಕಳೆದುಕೊಂಡು ತೀವ್ರ ನೊಂದ ಜೀವಕ್ಕೆ ಕೊನೆಗೂ ಪ್ರಾಕೃತಿಕವಿಕೋಪದಡಿ ನಿರ್ಮಿಸಿದ ಮನೆ ದೊರೆತಿದೆ.
ಎರಡು ವರ್ಷಗಳ ಹಿಂದೆ ಜೋಡುಪಾಲದಲ್ಲಿ ಸಂಭವಿಸಿದ ಭೀಕರ ಜಲ ಸ್ಪೋಟ ಸಂಭವಿಸಿದ ವೇಳೆ ಮೋಹಿತ್ ಎಂಬ ಯುವಕನ ತಂದೆ ಬಸಪ್ಪ, ತಾಯಿ ಗೌರಮ್ಮ .ಸಹೋದರಿ ಮೋನಿಶಾ ಮತ್ತು ಸಂಬಂಧಿ ಮದೆ ಗ್ರಾಮದ ಬೆಟ್ಟತ್ತೂರು ನಿವಾಸಿ ಮಂಜುಳಾ ಮೃತಪಟ್ಟಿದ್ದರು.ಬೆಟ್ಟದಿಂದ ಬಂದ ಪ್ರವಾಹ ಶೀಟು ಹಾಕಿದ ಮನೆ ಸಹಿತ ಮನೆ ಮಂದಿಯನ್ನು ಕೊಚ್ಚಿಕೊಂಡು ಹೋಗಿತ್ತು.
ಜೋಡುಪಾಲದ ಮನೆ ಸಂಪೂರ್ಣ ನೆಲ ಸಮವಾದ ಕಾರಣ ಸುಳ್ಯದಲ್ಲಿರುವ ಚಿಕ್ಕಪ್ಪ ಉಮೇಶ್ ಅವರ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರೂ ಅದರೆ ಇದೀಗ ಅವರಿಗೆ ದ.ಕ ಜಿಲ್ಲೆಯ ಗಡಿಭಾಗದ ಸನಿಹದಲ್ಲಿರುವ ಮದೆ ಗೋಳಿಕಟ್ಟೆಯಲ್ಲಿ ಸಂತ್ರಸ್ತರಿಗೆ ನಿರ್ಮಿಸಲಾದ 80 ಮನೆಗಳ ಪೈಕಿ ಸರಕಾರ ನೀಡಿದ ಮನೆಯಲ್ಲಿ ಮೋಹಿತ್ ಅವರಿಗೂ ಒಂದು ಮನೆ ದೊರೆತಿದೆ ಇದರೊಂದಿಗೆ ಸೂರು ಸಿಕ್ಕಂತಾಗಿದೆ. ಜೋಡುಪಾಲದಲ್ಲಿ 2018ರಲ್ಲಿ ಜಲ ಸ್ಟೋಟ ಸಂಭವಿಸಿದಾಗ ಮೋಹಿತ್ ತಿಪಟೂರಿನಲ್ಲಿ ಉದ್ಯೋಗದಲ್ಲಿದ್ದರೂ ಇದರಿಂದ ಅಪಾಯದಿಂದ ಬದುಕುಳಿದ್ದರೂ.