ಮಂಗಳೂರು ಕಮಿಷನರ್ ಹರ್ಷ ಕುಮಾರ್ ವರ್ಗಾವಣೆ ➤ ನೂತನ ಆಯುಕ್ತರಾಗಿ ವಿಕಾಸ್ ಕುಮಾರ್ ನೇಮಕ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 26, ನಗರದಲ್ಲಿ ಪೊಲೀಸ್ ಆಯುಕ್ತರಾಗಿದ್ದ ಡಾ. ಪಿ.ಎಸ್. ಹರ್ಷಾ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಮಂಗಳೂರಿಗೆ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ನೇಮಕಗೊಳಿಸಿ ಆದೇಶ ನೀಡಲಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೇ ಸರಕಾರ ಆಡಳಿತಾತ್ಮಕ ಕ್ಷೇತ್ರದಲ್ಲಿ ಮೇಜರ್ ಸರ್ಜರಿ ನಡೆಸಿದೆ. ವಿಕಾಸ್ ಕುಮಾರ್ ಈ ಹಿಂದೆ ನಕ್ಸಲ್ ನಿಗ್ರಹ ಪಡೆಯ ಡಿಐಜಿಪಿಯಾಗಿದ್ದ ಇವರು ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸಿ ಅನುಭವವನ್ನು ಹೊಂದಿದ್ದಾರೆ. ಇನ್ನು ಡಾ. ಹರ್ಷಾ ಅವರನ್ನು ಬೆಂಗಳೂರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿಐಜಿಯಾಗಿ ನೇಮಕಗೊಳಿಸಿ ಆದೇಶ ನೀಡಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸರಕಾದ ಮುಖ್ಯ ಕಾರ್ಯದರ್ಶಿ ನಾಗಪ್ಪ ಎಸ್. ಪಾಟೀಲ್ ಆದೇಶ ನೀಡಿದ್ದಾರೆ.

Also Read  'ಮೋದಿಯನ್ನು ಟೀಕಿಸಿದವರು ಯಾರೂ ಉದ್ಧಾರವಾಗಿಲ್ಲ'       ➤ ಖರ್ಗೆಗೆ ಈಶ್ವರಪ್ಪ ತಿರುಗೇಟು

error: Content is protected !!
Scroll to Top