ಉಳ್ಳಾಲ ಎಸ್ಐ ಬಳಿಕ ಎಎಸ್ಐ ಗೂ ಕೊರೋನಾ‌ ಪಾಸಿಟಿವ್

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.26, ಮೊನ್ನೆಯಷ್ಟೇ ಉಳ್ಳಾಲ ಠಾಣಾ ಪಿಎಸ್‍ಐ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇಂದು ಠಾಣಾ ಎ ಎಸ್ ಐ ಅವರಿಗೂ ಸೋಂಕು ಖಚಿತಪಟ್ಟಿದೆ. ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳ್ಳಾಲದಲ್ಲಿ ಕಳೆದೊಂದು ವಾರದಿಂದ ಐವರಲ್ಲಿ ಸೋಂಕು ಪತ್ತೆಯಾದಂತಾಗಿದೆ. ಇವರಲ್ಲಿ 57ರ ಹರೆಯದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದೀಗ ಸೋಂಕು ದೃಢಪಟ್ಟ ಎ ಎಸ್ ಐ ಕಳೆದ ಕೆಲ ಸಮಯಗಳಿಂದ ಕರ್ನಾಟಕ-ಕೇರಳ ಗಡಿಭಾಗವಾದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

Also Read  ಕೊಯಿಲ: ಮಹಿಳೆ ಆತ್ಮಹತ್ಯೆ ➤ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

error: Content is protected !!
Scroll to Top