ಕಟೀಲು: ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್..!! ➤ ಮನೆ ಸೀಲ್ ಡೌನ್!!

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.26, ಇಲ್ಲಿನ ಕ್ಲಿನಿಕ್ ಒಂದರಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಕಟೀಲು ಸಮೀಪದ ಮಹಿಳೆಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇದರಿಂದ ಪರಿಸರದ ಜನರನ್ನು ಆತಂಕಕ್ಕೀಡು ಮಾಡಿದೆ.

ಕಟೀಲು ಬಲ್ಲಣ ಮಾರಡ್ಕ ಎಂಬಲ್ಲಿನ 35 ವರ್ಷ ಪ್ರಾಯದ ಮಹಿಳೆಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ವೈದ್ಯರಲ್ಲಿ ಪಾಸಿಟಿವ್ ಕಂಡು ಬಂದ ಕಾರಣ ಅಲ್ಲಿನ ಸಿಬ್ಬಂದಿಯನ್ನು ತಪಾಸಣೆ ನಡೆಸಿದಾಗ ಮಹಿಳೆಯೋರ್ವರಲ್ಲಿ ಪಾಸಿಟಿವ್ ಕಂಡುಬಂದಿದೆ. ಮನೆಯಲ್ಲಿ ಒಟ್ಟು ಏಳು ಮಂದಿ ವಾಸಿಸುತ್ತಿದ್ದು, ಮನೆಯನ್ನೂ ಸೀಲ್ ಡೌನ್ ಮಾಡಿ ಮನೆಯಲ್ಲಿರುವವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು, ಮೂಲ್ಕಿ ಠಾಣಾಧಿಕಾರಿ ಜಯರಾಮ ಗೌಡ ಭೇಟಿ ನೀಡಿದ್ದಾರೆ. ಮಹಿಳೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ಚಿಕಿತ್ಸೆಗಾಗಿ ಕಿನ್ನಿಗೋಳಿಯ ಆಸ್ಪತ್ರೆ ಸಹಿತ ನಾನಾ ಕಡೆ ಭೇಟಿ ನೀಡಿದ್ದರಿಂದ ಆತಂಕ ಸೃಷ್ಟಿಯಾಗಿದೆ.

Also Read  ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಭಜನಾ ಕಾರ್ಯಕ್ರಮ

error: Content is protected !!
Scroll to Top