ಕಟೀಲು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ➤ ಅಪಾಯದಿಂದ ಪಾರಾದ ಕುಟುಂಬ

(ನ್ಯೂಸ್ ಕಡಬ)newskadaba.com ಬಜ್ಪೆ, ಜೂ.26, ಕಟೀಲು ಸಮೀಪದ ಎಕ್ಕಾರು ಅರಸುಲೆ ಪದವು ಎಂಬಲ್ಲಿ ಚಲಿಸುತ್ತಿದ್ದ ಕಾರ್ ಶಾಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿಗೆ ತುತ್ತಾದ ಘಟನೆ ಇಂದು ನಡೆದಿದೆ.

ಕಾರಿನಲ್ಲಿದ್ದವರು ಬೆಳ್ತಂಗಡಿ ಮೂಲದವರು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗಡೆ ಬರುವಷ್ಟರಲ್ಲಿ ಬೆಂಕಿಯ ಜ್ವಾಲೆ ಇಡೀ ಕಾರನ್ನು ಆವರಿಸಿದ್ದು, ಜನವಸತಿ ಇಲ್ಲದ ಪ್ರದೇಶವಾದ್ದರಿಂದ ಯಾರೂ ಇರಲಿಲ್ಲ ಎನ್ನಲಾಗಿದೆ. ಬಳಿಕ ಸ್ಥಳೀಯ ನಿವಾಸಿ ಸ್ಟ್ಯಾನಿ ಪಿಂಟೋ ಎಂಬವರು ತಕ್ಷಣ ಕಾರ್ಯಪ್ರವೃತ್ತರಾಗಿ ಕಟೀಲು ಯತೀಶ್ ಶೆಟ್ಟಿಯವರ ನೀರಿನ ಟ್ಯಾಂಕರ್ ಕರೆಸಿ ಬೆಂಕಿ ನಂದಿಸುವಲ್ಲಿ ಶ್ರಮ ವಹಿಸಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಅದೃಷ್ಟವಶಾತ್ ಕಾರಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಲಿಲ್ಲ. ಸ್ಥಳಕ್ಕೆ ಬಜಪೆ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

Also Read  ಪುತ್ತೂರು ವಿಭಾಗದ KSRTC ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ

error: Content is protected !!
Scroll to Top