(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.26: ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವ ಸಂಪ್ಯ ಉದಯಗಿರಿ ನಿವಾಸಿಯೊಬ್ಬರಿಗೆ ಕೊರೋನಾ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಇತ್ತ, ಪುತ್ತೂರಿನ ಬನ್ನೂರಿನ ಚೆಲುವಮ್ಮನ ಕಟ್ಟೆ ಎಂಬಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದ ಕಂಬಳ ಬೆಟ್ಟು ನಿವಾಸಿಗೆ ಕೊರೋನಾ ದೃಢ ಪಟ್ಟ ಹಿನ್ನಲೆಯಲ್ಲಿ ಇದೀಗಾ ಬನ್ನೂರಿನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಆರ್ಯಾಪು ಗರಾಮ ಮತ್ತು ಪುತ್ತೂರು ನಗರಸಭೆ ಗಡಿ ಭಾಗದಲ್ಲೇ ಕೊರೋನಾ ಅಟ್ಟಹಾಸ ಮರೆದಿದ್ದು, ಕೊರೊನಾ ದೃಢಪಟ್ಟ ವ್ಯಕ್ತಿ ನಗರಸಭೆ ವ್ಯಾಪ್ತಿಗೆ ಸೇರಿದವರಾಗಿದ್ದಾರೆ. ಇನ್ನು ಇದರ ಜೊತೆಗೆ. ಪುತ್ತೂರಿನ ಬನ್ನೂರಿನ ಚೆಲುವಮ್ಮನ ಕಟ್ಟೆ ಎಂಬಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದ ಕಂಬಳ ಬೆಟ್ಟು ನಿವಾಸಿಗೆ ಕೊರೋನಾ ದೃಢ ಪಟ್ಟ ಹಿನ್ನಲೆಯಲ್ಲಿ ಇದೀಗಾ ಬನ್ನೂರಿನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಜೂ 25 ರಂದು ಬೆಳಿಗ್ಗೆ ನಗರ ಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತು ಆರೋಗ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಗೇಟ್ ಗೆ ಬ್ಯಾರಿಕೇಟ್ ಇಟ್ಟು ಸೀಲ್ ಡೌನ್ ಮಾಡಿದ್ದಾರೆ.. ಇದರ ಜತೆಗೆ ಆ ಮನೆಯಿಂದ ಯಾರು ಹೊರಗೆ ಬಾರದಂತೆ ಹಾಗೂ ಒಳಗೂ ಯಾರು ಹೋಗದಂತೆ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆಯನ್ನು ನಗರ ಸಭೆ ಮಾಡಲಿದೆ.