ಉಳ್ಳಾಲ: ಕೋಡಿಯ ಇನ್ನೋರ್ವ ಮಹಿಳೆಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ಉಳ್ಳಾಲ, ಉಳ್ಳಾಲದಲ್ಲಿ ಕೋವಿಡ್- 19 ಆತಂಕ ಮುಂದುವರಿದಿದ್ದು, ಉಳ್ಳಾಲ ಠಾಣಾ ಎಸ್‌ಐ ಸೇರಿದಂತೆ ಇಬ್ಬರು ಮಹಿಳೆಯರಿಗೆ ಸೋಂಕು ತಗಲಿ ಮಹಿಳೆಯೊಬ್ಬರು ಮೃತಪಟ್ಟ ಬೆನ್ನಿಗೆ ಇಂದು ಉಳ್ಳಾಲದಲ್ಲಿ ಇನ್ನೋರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಉಳ್ಳಾಲ ಕೋಡಿಯ ಮಹಿಳೆಯೋರ್ವರು ಎದೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಮೊದಲು ಇವರ ಗಂಟಲ ದ್ರವ ಪರೀಕ್ಷೆಯನ್ನು ನಡೆಸಿದ್ದು, ಈ ಸಂದರ್ಭ ಸೋಂಕು ತಗಲಿರುವುದು ದೃಢಪಟ್ಟಿದೆ. ಉಳ್ಳಾಲದ ಇವರ ನಿವಾಸ ಕೋಡಿಯಲ್ಲಿ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Also Read  ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಇಟ್ಟ ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

error: Content is protected !!
Scroll to Top