ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.26, ತನಗೆ ಕೋವಿಡ್-19 ಸೋಂಕು ತಾಗಿರುವ ಕಾರಣದಿಂದ ನೊಂದ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮುಂಜಾನೆ 2.30ರ ಸುಮಾರಿಗೆ ಮಹಿಳೆಯೋರ್ವರು ಆಸ್ಪತ್ರೆಯ ಬಾತ್ ರೂಮ್ ನಲ್ಲಿ ತನ್ನ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಣಿಗೆ ಶರಣಾದ ಮಹಿಳೆಯು ಕುಣಿಗಲ್ ಮೂಲದವರಾಗಿದ್ದು, ಸದ್ಯ ರಾಜಗೋಪಾಲ ನಗರದಲ್ಲಿ ವಾಸವಾಗಿದ್ದರು. ಇದೇ ತಿಂಗಳ 18ರಂದು ಇವರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಕಂಡು ಬಂದಿತ್ತು. ಹೀಗಾಗಿ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಹಿಳೆಯ ಮಗ, ಸೊಸೆ ಮತ್ತು ಮೊಮ್ಮಗುವಿಗೂ ಕೋವಿಡ್ ಸೋಂಖು ದೃಢಪಟ್ಟಿದೆ. ಈ ಕಾರಣದಿಂದ ನೊಂದು ಮಹಿಳೆ ಇಂತಹ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ವಸತಿಗೃಹದಲ್ಲಿ ನೇಣು ಬಿಗಿದು ಪ್ರೊಫೆಸರ್‌ ಆತ್ಮಹತ್ಯೆ

error: Content is protected !!
Scroll to Top