ಪುಂಜಾಲಕಟ್ಟೆ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರ ಕೈಚಳಕ

(ನ್ಯೂಸ್ ಕಡಬ) newskadaba.com.ಪುಂಜಾಲಕಟ್ಟೆ,ಜೂ.25: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ಪುಳಿಮಜಲು ಎಂಬಲ್ಲಿ ಸಂಭವಿಸಿದೆ.


ಇಲ್ಲಿನ ಪುರುಷೋತ್ತಮ ಗೌಡ ಅವರ ಮನೆಯಲ್ಲಿ ಬುಧವಾರ ಕಳ್ಳತನ ನಡೆದಿರುವುದು. ಪುರುಷೋತ್ತಮ ಗೌಡ ಅವರು ಬೆಳಗ್ಗೆ ಮನೆ ಮಂದಿ ಸಹಿತ ಪಾರೆಂಕಿ ಗ್ರಾಮದ ರಕ್ತೇಶ್ವರಿಪದವು ಎಂಬಲ್ಲಿಯ ತಮ್ಮ ಕೃಷಿ ಜಮೀನಿನ ಅಡಿಕೆ ತೋಟಕ್ಕೆ ಮದ್ದು ಬಿಡಲು ತೆರಳಿದ್ದು. ಮಧ್ಯಾಹ್ನ ಮನೆಗೆ ಬಂದು ಬಾಗಿಲ ಬೀಗ ತೆರಯಲು ಹೊದಾಗ ಅಚ್ಚರಿಯಾಗಿತ್ತು.
ಮನೆಯಿಂದ ಹೊರಡುವಾಗ ಚಪ್ಪಲ್ ಸ್ಟ್ಯಾಂಡ್‍ನಲ್ಲಿ ಶೂ ವೊಂದರಲ್ಲಿ ಇಟ್ಟಿದ್ದ ಕೀ ಇಟ್ಟ ಜಾಗದಲ್ಲಿರದೆ ಬೇರೆ ಕಡೆ ಇಡಲಾಗಿತ್ತು. ಇದರಿಂದ ಅನುಮಾನಗೊಂಡು ಬಾಗಿಲು ತೆಗೆದು ನೋಡಿದಾಗ ಕಳ್ಳರು ಮಲಗುವ ಕೋಣೆಯಲ್ಲಿದ್ದ ದೊಡ್ಡ ಕಪಾಟಿನ ಬಾಗಿಲು ತೆರೆದು ಒಂದು ವ್ಯಾನಿಟಿ ಬ್ಯಾಗ್‍ನೊಳಗೆ ಇಟ್ಟಿದ್ದ ಸುಮಾರು 60 ಗ್ರಾಂ ತೂಕದ ಚಿನ್ನಾಭರಣಗಳು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

Also Read  ನಮಗೆ 'ಟ್ರಂಪ್' ಬೇಕು ➤ ಅಮೆರಿಕಾದಲ್ಲಿ ರಸ್ತೆಗಿಳಿದ ಲಕ್ಷಾಂತರ ಮಂದಿ


ಒಟ್ಟು ಒಂದು ಲಕ್ಷದ ಎಂಬತ್ತು ಸಾವಿರ ರೂ ಬೆಲೆಬಾಳುವ ಚಿನ್ನಾಭರಣ ಕಳವಾಗಿದೆ ಎಂದು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!
Scroll to Top