ಪೊಲೀಸ್ ಇಲಾಖೆ ವಾಹನಗಳ ಬಿಡಿಭಾಗಗಳ ಹರಾಜು

(ನ್ಯೂಸ್ ಕಡಬ)newskadaba.com ಮಂಗಳೂರು ಜೂ. 25, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ ಸೇರಿದ ಮೋಟಾರು ವಾಹನ ವಿಭಾಗದ 2019-20ನೇ ಸಾಲಿನ ನಿಷ್ಕ್ರಿಯಗೊಳಿಸಲಾದ ಹಳೆಯ ಬಿಡಿಭಾಗಗಳು, ಹಳೆಯ ಟಯರು ಟ್ಯೂಬುಗಳು ಹಾಗೂ ಹಳೆಯ ಮಡ್ಡ್ ಆಯಿಲ್‍ಗಳ ಬಹಿರಂಗ ಹರಾಜು ಮೂಲಕ ವಿಲೇವಾರಿ ಜುಲೈ 9 ರಂದು ಬೆಳಿಗ್ಗೆ 11 ಗಂಟೆಗೆ  ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ನಿರುಪಯುಕ್ತ ವಸ್ತುಗಳ ವಿವರ:- ಹಳೆಯ ನಿಷ್ಕ್ರಿಯಗೊಳಿಸಲಾದ ಬಿಡಿ ಭಾಗಗಳ ಸಂಖ್ಯೆ – 419, ನಿಗದಿಗೊಳಿಸಿದ ಮೊತ್ತ ರೂ 16 ಸಾವಿರ, ಹಳೆಯ ಟಯರ್‍ಟ್ಯೂಬ್‍ಗಳು(ದ್ವಿಚಕ್ರ 12+12, ಲಘುವಾಹನ 170+110), ಸಂಖ್ಯೆ – 182+122, ನಿಗದಿಗೊಳಿಸಿದ ಮೊತ್ತ ರೂ 22 ಸಾವಿರ, ಹಳೆಯ ಮಡ್ಡ್ ಆಯಿಲ್ (ನಿರುಪಯುಕ್ತ ಆಯಿಲ್)360 ಲೀ, ನಿಗದಿಗೊಳಿಸಿದ ಮೊತ್ತ ರೂ. 7.500 ಸಾವಿರ ಆಗಿದೆ.

Also Read  ಕಡಬ: ಕಾಲೇಜು ವಿದ್ಯಾರ್ಥಿನಿಯರಿಗೆ ಆ್ಯಸಿಡ್ ಎರಚಿದ ಪ್ರಕರಣ ಆರೋಪಿಯ ಜಾಮೀನು ಅರ್ಜಿ ವಜಾ

ಟೆಂಡರ್ ಅರ್ಜಿ ಸಲ್ಲಿಸಲು ಜುಲೈ 8 ರಂದು ಸಂಜೆ 5 ಗಂಟೆಯ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸು ಅಧೀಕ್ಷಕ ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top