ಆನ್‍ಲೈನ್ ಕ್ಲಾಸ್‍ಗೆ ಹೆದರಿ 12 ವರ್ಷದ ಬಾಲಕಿ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com.ರಾಜ್ ಕೋಟ್,ಜೂ.25:ಕೊರೊನಾದಿಂದಾಗಿ ಶಾಲೆಗಳು ಮುಚ್ಚಿವೆ ಮಕ್ಕಳು ಶಿಕ್ಷಕರು ಮನೆಯಲ್ಲೇ ಕೂರುವಂತಾಗಿದೆ ಈ ಮಧ್ಯೆ ಕೆಲವು ರಾಜ್ಯಗಳಲ್ಲಿ ಆನ್ ಲೈನ್ ಕ್ಲಾಸ್‍ಗಳೂ ಶುರುವಾಗಿದೆ. ಆದರೆ ಅದರಲ್ಲಿ ಸಾಕಷ್ಟು ತೊಡಕುಗಳನ್ನು ಎದುರಿಸುತ್ತಾ ಶಿಕ್ಷಕರು ಕ್ಲಾಸ್ ಮಾಡುತ್ತಿದ್ದಾರೆ. ಮಕ್ಕಳೂ ಕೂಡ ತೊಡಕುಗಳನ್ನು ಮೆಟ್ಟಿನಿಂತು ಪಾಲ್ಗೊಳ್ಳುತ್ತಿದ್ದಾರೆ.


ಇಂತಹ ಇ-ಶಿಕ್ಷಣದಿಂದ ಸಮಸ್ಯೆಯನ್ನು ಎದುರಿಸುತ್ತಿರುವವರೂ ಮಾತ್ರ ಬಡ ವಿದ್ಯಾರ್ಥಿಗಳೂ ಅವರಿಗೆ ಸ್ಮಾರ್ಟ್ ಪೋನ್. ಕಂಪ್ಯೂಟರ್‍ಗಳನ್ನು ಖರೀದಿಸುವುದೇ ಸಮಸ್ಯೆಯಾಗುತ್ತಿದೆ. ಮತ್ತೆ ಕೆಲವು ಮಕ್ಕಳು ಆನ್ ಲೈನ್ ಕ್ಲಾಸ್ ಒಗ್ಗುತ್ತಿಲ್ಲ. ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈಗ ಆನ್ ಲೈನ್ ಕ್ಲಾಸ್ ನಿಂದ ತೀವ್ರ ಒತ್ತಡಕ್ಕೆ ಒಳಗಾದ 12 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‍ನ ರಾಜ್ ಕೋಟ್‍ನಲ್ಲಿ ನಡೆದಿದೆ.


ಖುಷಿ ಮೃತ ಬಾಲಕಿ. ಇವಲ ತಂದೆ ಆಟೋ ಗ್ಯಾರೇಜ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಬಳಿ ಲೈನ್ ಕ್ಲಾಸ್‍ಗೆ ಅಗತ್ಯವಾಗಿ ಬೇಕಾದ ಸ್ಮಾರ್ಟ್‍ಫೋನ್, ಕಂಪ್ಯೂಟರ್ ಏನೂ ಇರಲಿಲ್ಲ.ಲಾಕ್ ಡೌನ್ ನಿಂದ ಖುಷಿಯ ಕುಟುಂಬವೂ ಸಂಕಷ್ಟದಲ್ಲಿತ್ತು. ಆದರೂ ಅವಳ ತಂದೆ ಕಷ್ಟಪಟ್ಟು ಆಕೆಗೆ 10000 ರೂ ಬೆಲೆಯ ಸ್ಮಾರ್ಟ್ ಫೋನ್ ಕೊಡಿಸಿದ್ದರು ತನ್ನ ಮಗಳು ಶಿಕ್ಷನದಿಂದ ವಂಚಿತಳಾಗಬಾರದು ಎಂಬುದು ಅವರ ಆಶಯವಾಗಿತ್ತು. ಆದರೆ ವಿದ್ಯಾರ್ಥಿನಿ ಖುಷಿಗೆ ಆನ್ ಲೈನ್ ಕ್ಲಾಸ್‍ಗೆ ಹೊಂದಿಕೊಳ್ಳಲು ಸಾಧ್ಯವಾಗದೆ ತೀವ್ರ ಒತ್ತಡಕ್ಕೆ ಒಳಗಾಗಿದ್ದಳು. ಶಿಕ್ಷಕರು ಕೊಡುತ್ತಿದ್ದ ಹೋಂವರ್ಕ್‍ಗಳನ್ನು ಮಾಡುವುದು ಆಕೆಗೆ ಕಷ್ಟವಾಗುತ್ತಿತ್ತು. ಇದರಿಂದ ಬೇಸರಗೊಂಡು ಖಿನ್ನತೆಗೆ ಜಾರಿದ್ದಳು. ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ಖುಷಿಯ ಬಳಿ ಆಕೆಯ ಅಮ್ಮ ಹೋಂ ವರ್ಕ್ ಬೇಗ ಮುಗಿಸು ಎಂದು ಹೇಳಿದರು. ಆದರೆ ಖುಷಿ ತನ್ನ ರೊಂಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ ಒಳಹೋಗಿ ನೋಡುವಷ್ಟರಲ್ಲಿ ಖುಷಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!

Join WhatsApp Group

WhatsApp Share