ಪದ್ಮಶ್ರೀ ಪ್ರಶಸ್ತಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು ಜೂ, 24, ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2021ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ದಿನದ ಹಿಂದಿನ ದಿನಾಂಕದಂದು ಕೇಂದ್ರ ಸರಕಾರದಿಂದ ಪ್ರಕಟಿಸಲಾಗುತ್ತದೆ.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಅತ್ಯುತ್ತಮ ಗುಣಮಟ್ಟ ಹೊಂದಿರಬೇಕು. ಅಲ್ಲದೆ ಆ ವ್ಯಕ್ತಿಯು ಜೀವನ ಪರ್ಯಂತ ಸಾಧಿಸಿರುವ ಪ್ರಗತಿಯನ್ನು ಹಾಗೂ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅರ್ಹ ಅರ್ಜಿದಾರರು ನಿಗದಿತ ನಮೂನೆಯನ್ನು ಕಚೇರಿಯಿಂದ ಪಡೆದು ವೈಯಕ್ತಿಕ ವಿವರಗಳನ್ನು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಬೇಕು ಮತ್ತು ಗರಿಷ್ಠ ಎರಡು ಪುಟಗಳೊಳಗಿನ ಅವರ ಸಾಧನೆಗಳ ಕುರಿತಾದ ವಿವರವನ್ನು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪ್ರತ್ಯೇಕವಾಗಿ ಲಗತ್ತಿಸಿ ಜೂನ್ 25 ರ ಒಳಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲೆ, ಮಂಗಳೂರು ಇವರ ಕಚೇರಿಗೆ ಸಲ್ಲಿಸಬೇಕು.

Also Read  ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ವಿಳಂಬ ಆರೋಪ ➤ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಹೆಚ್ಚಿನ ಮಾಹಿತಿಗಾಗಿ ದ. ಕ. ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಇ-ಮೇಲ್ adyssdk@yahoo.com, ದೂರವಾಣಿ ಸಂಖ್ಯೆ 0824 2451264 ನ್ನು ಸಂಪರ್ಕಿಸಲು ದ. ಕ. ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top