(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ.25 ಬೇಧಿಯ ಕಾರಣದಿಂದ 8 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಉಳ್ಳಾಲದ ಅಝಾದ್‍ನಗರದ ಮಹಿಳೆಗೆ ನಿನ್ನೆ ಕೊರೊನಾ ದೃಢ ಪಟ್ಟಿತ್ತು ಆದರೆ ಇಂದು ಮಹಿಳೆ ಮೃತ ಪಟ್ಟಿರುವುದು ವರದಿಯಾಗಿದೆ.
ಉಲ್ಳಾಲದ ಅಝಾದ್‍ನಗರದ 57ರ ಹರೆಯದ ಮಹಿಳೆಗೆ 10 ದಿನಗಳ ಹಿಂದೆ ಬೇದಿ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ಸಂದರ್ಭದಲ್ಲಿ ಮಹಿಳೆಯ ಗಂಟಲುದ್ರವ ಪರೀಕ್ಷೆ ತೆಗೆದುಕೊಂಡಿದ್ದು ನಿನ್ನೆ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರದ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬುಧವಾರ ಮಹಿಳೆ ಸಾವನ್ನಪ್ಪಿದ್ದಾರೆ ಈ ಕುರಿತು ಆರೋಗ್ಯ ಇಲಾಖೆ ಹಾಗೂ ಶಾಸಕರು ಕೋವಿಡ್ ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದು. ಆರೋಗ್ಯ ಇಲಾಖೆಯಿಂದ ಅಧಿಕೃತ ಹೇಳಿಕೆ ಬಾಕಿ ಇದೆ.
ಈ ಮಹಿಳೆಗೆ ಕೊರೊನಾ ಹೇಗೆ ಬಂದಿದೆ ಎಂದು ಇನ್ನು ತಿಳಿದು ಬಂದಿಲ್ಲ. ಮಹಿಳೆಗೆ ಕೊರೊನಾ ದೃಢಪಟ್ಟ ಕಾರಣದಿಂದ ಮಹಿಳೆ ವಾಸವಿದ್ದ ಮನೆ ಹಾಗೂ ಆ ಕೌಪೌಂಡ್‍ನಲ್ಲೇ ಇದ್ದ ಇನ್ನೊಂದು ಮನೆಯನ್ನು ಸೀಲ್‍ಡೌನ್ ಮಾಡಲಾಗಿದ್ದು ಮಹಿಳೆಯ ಮನೆಯ 15 ಮಂದಿ ಹಾಗೂ ನೆರೆಮನೆಯ 4 ಮಂದಿ ಸೇರಿ ಒಟ್ಟು 19ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇದೀಗ ಮಹಿಳೆ 8ದಿನಗಳ ಕಾಲ ಚಿಕಿತ್ಸೆ ಪಡೆದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಕೊರೊನಾ ಭೀತಿ ಉಂಟಾಗಿದ್ದು ಮಹಿಳೆಗೆ ಚಿಕಿತ್ಸೆ ನೀಡಿದ ಸಿಬ್ಬಂದಿ ಸೇರೆದಂತೆ ಆಸ್ಪತ್ರೆಯ ಹಲವು ಮಂದಿಯ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ.