ಎಸ್ಸೆಸ್ಸೆಲ್ಸಿ ಪರೀಕ್ಷೆ ➤ ಎಸ್ಕೆಎಸ್ಸೆಸ್ಸೆಫ್ ಕರಾಯ ಶಾಖಾ ವತಿಯಿಂದ ಪರೀಕ್ಷಾ ಹಾಲ್ ಹಾಗೂ ಪರಿಸರ ಸ್ವಚ್ಛತೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂ.24, ಎಸ್ಕೆಎಸ್ಸೆಸ್ಸೆಫ್ ಕರಾಯ ಶಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಗೊಂಡ ಕರಾಯ ಪ್ರೌಢ ಶಾಲಾ ಕೊಠಡಿ ಹಾಗೂ ಪರಿಸರ ವನ್ನು ಎಸ್ಕೆಎಸ್ಸೆಸ್ಸೆಫ್ ಕರಾಯ ವಿಖಾಯ ಸೇವಾ ತಂಡದ ಸಾರಥಿಗಳು ಸ್ವಚ್ಛಗೊಳಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಕೆ.ಶಾಹುಲ್ ಹಮೀದ್ ಮಾತನಾಡಿ, ನಾಡಿನ ನಾನಾ ಭಾಗದಲ್ಲಿ ತುರ್ತು ಸೇವಾ ರಂಗದಲ್ಲಿ ಮಿಂಚುತ್ತಿರುವ ವಿಖಾಯ ತಂಡದ ‘ವಿಂಗ್’ ನಮ್ಮೂರಲ್ಲಿ ಕಾರ್ಯ ರಚಿಸುತ್ತಿದ್ದು
ಅಭಿಮಾನವಿದೆ ಎಂದರು. ಶಾಲಾ ಮುಖ್ಯ ಶಿಕ್ಷಕರಾದ ಶಿವಬಾಲ್ ಮಾತನಾಡಿ ತಂಡದ ಕಾರ್ಯ ವೈಖರಿ ಯನ್ನು ಶ್ಲಾಘಿಸಿದರು. ಶಾಲಾ ಅಧ್ಯಾಪಕರಾದ ಮೋಹನ್, ಸುದರ್ಶನ್ ಉಪಸ್ಥಿತರಿದ್ದರು.
ಸೇವಾ ತಂಡದಲ್ಲಿ ಸಿದ್ದೀಕ್ ಫೈಝಿ ಕರಾಯ, ಕೆ.ಯಚ್.ಲತೀಫ್, ಅಬ್ದುಲ್ ಲತೀಫ್ ಇ.ಕೆ , ಅಶ್ರಫ್ ಹನೀಫಿ, ರಶೀದ್ ಕಡಂಬಿಲ, ಅಬ್ದುಲ್ಲಾ ಮೌಲವಿ ಪೂಂಜಾಳ, ತಲ್ಹತ್ ಡಿ.ಕೆ, ತಸ್ಲೀಂ ಕರಾಯ, ಸತ್ತಾರ್ ಕೆ. ಯಂ, ಮುನವ್ವರ್ ಕೆ.ಯಂ, ಸಫ್ವಾನ್ ಕೆ ಯಂ, ಹಿಶಾಂ ಕೆ ಯಂ, ಸಾಬಿತ್ ಕೋಟ್ರಾಸ್, ಸುಪಿಯಾನ್ ಇ.ಕೆ, ಜಾಸಿಮ್ ಹೋನೆಸ್ಟ್, ಸಿದ್ದೀಕ್ ಕಡಂಬಿಲ, ಸಿನಾನ್ ಕೆ ಯಂ, ಫರ್ಹತ್ ಇ.ಕೆ, ಅಶ್ರಫ್ ಮಾರ್ಗ, ಬಿಲಾಲ್ ಇ.ಕೆ
ಮುಸ್ತಫ ಸಹಕಾರ ನೀಡಿದರು. ಸಮಿತಿ ಕಾರ್ಯದರ್ಶಿ ಕೆ.ಯಂ.ಅಬ್ದುಲ್ ಅಝೀಝ್ ಫೈಝಿ ಸ್ವಾಗತಿಸಿ, ಕರಾಯ ಜಮಾಅತ್ ಕಾರ್ಯದರ್ಶಿ ಇ.ಕೆ .ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ವಂದಿಸಿದರು.

Also Read  ಕೊಂಬಾರು: ಪತ್ರಕರ್ತರ ಗ್ರಾಮ ವಾಸ್ತವ್ಯದ ಫಲಶ್ರುತಿ ➤ ಹಲವು ವರ್ಷಗಳಿಂದ ಬೆಳಕು ಕಾಣದ ಶಿವರಾಮ ಕುಟುಂಬಕ್ಕೆ ಕೊನೆಗೂ ಬಂತು ವಿದ್ಯುತ್

error: Content is protected !!
Scroll to Top