ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ಎರಡನೇ ವರ್ಷದ ಮಹಾಸಭೆ ➤ ನೂತನ ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ)newskadaba.comಮಂಗಳೂರು, ಜೂ.24, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಎರಡನೇ ವರ್ಷದ ಮಹಾಸಭೆಯು ತೊಕ್ಕೊಟ್ಟು ಎ.ಕೆ ಇಂಟರ್ ನ್ಯಾಷನಲ್ ಹೋಟೆಲಿನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸತ್ತಾರ್ ಪುತ್ತೂರು ಕಳೆದ ಸಾಲಿನ ವರದಿಯನ್ನು ಮಂಡಿಸಿದರು. ಸಂಸ್ಥೆಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಮುಖ್ಯ ಸಲಹೆಗಾರರಾದ ಶೇಖ್ ಫಯಾಝ್ ಅಲಿ ಬೈಂದೂರು ಮಾತನಾಡಿದರು‌. ವ್ಯವಸ್ಥಾಪಕರಾದ ಸಂಶುದ್ದೀನ್ ಬಳ್ಕುಂಜೆ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಅಧ್ಯಕ್ಷರ ಅನುಮತಿಯ ಮೇರೆಗೆ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ನಝೀರ್ ಹುಸೈನ್ ಮಂಚಿಲ ಉಪಸ್ಥಿತರಿದ್ದರು.
ಸಂಚಾಲಕರಾದ ನವಾಝ್ ಉಳ್ಳಾಲ ಸ್ವಾಗತಿಸಿ, ಖಜಾಂಜಿ ಸಫ್ವಾನ್ ಕಲಾಯಿ ವಂದಿಸಿದರು. ಮಾಧ್ಯಮ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.

Also Read  ಕಡಬ: ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಭೆ - ಸಂಘಕ್ಕೆ 3.44 ಲಕ್ಷ ರೂ. ಲಾಭ

ನೂತನ ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಗೌರವಾಧ್ಯಕ್ಷರಾಗಿ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ, ಅಧ್ಯಕ್ಷರಾಗಿ ನಝೀರ್ ಹುಸೈನ್ ಮಂಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಕಲಾಯಿ, ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಕೃಷ್ಣಾಪುರ ಮತ್ತು ತಸ್ಲೀಂ ಹರೇಕಳ ನೇಮಕಗೊಂಡರು. ಸಂಚಾಲಕರಾಗಿ ಸಂಶುದ್ದೀನ್ ಬಳ್ಕುಂಜೆ, ವ್ಯವಸ್ಥಾಪಕರಾಗಿ ನವಾಝ್ ಉಳ್ಳಾಲ, ಖಜಾಂಜಿಯಾಗಿ ಸತ್ತಾರ್ ಪುತ್ತೂರು, ನಿರ್ದೇಶಕರಾಗಿ ಅಲ್ಮಾಝ್ ಉಳ್ಳಾಲ, ಮುಖ್ಯ ಸಲಹೆಗಾರರಾಗಿ ಶೇಖ್ ಫಯಾಝ್ ಅಲಿ ಬೈಂದೂರು ಆಯ್ಕೆಗೊಂಡರು. ಅದೇ ರೀತಿ ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥರಾಗಿ ಮುಸ್ತಫಾ ಕೆ.ಸಿ ರೋಡ್, ಸಂವಹನ ಕಾರ್ಯದರ್ಶಿಯಾಗಿ ಬಾತಿಶ್ ತೆಕ್ಕಾರು, ಮಾಧ್ಯಮ ಕಾರ್ಯದರ್ಶಿಗಳಾಗಿ ಜಲೀಲ್ ಉಳ್ಳಾಲ ಮತ್ತು ಸಫ್ವಾನ್ ಸವಣೂರು, ರಕ್ತದಾನ ಶಿಬಿರಗಳ ಮೇಲ್ವಿಚಾರಕರಾಗಿ ಇಮ್ತಿಯಾಝ್ ಬಜ್ಪೆ ಹಾಗೂ ಶಿಬಿರದ ಉಸ್ತುವಾರಿಗಳಾಗಿ ಖಾದರ್ ಮುಂಚೂರು, ಸಿರಾಜ್ ಉಳಾಯಿಬೆಟ್ಟು, ರಾಫಿಝ್ ಕೃಷ್ಣಾಪುರ ಆಯ್ಕೆಯಾದರು. ಇನ್ನುಳಿದ ಸದ‌ಸ್ಯರನ್ನು ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಲಾಯಿತು.

Also Read  ದಾಖಲಾತಿ ಇಲ್ಲದೇ 20 ಲಕ್ಷ ರೂ. ಸಾಗಾಟ ➤ ಆರೋಪಿ ಸಹಿತ ನಗದು ಪೊಲೀಸ್ ವಶಕ್ಕೆ

error: Content is protected !!
Scroll to Top