ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳ ಕಳ್ಳತನ ➤ 7 ಮಂದಿಯ ಬಂಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 22, ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳನ್ನು ಕಳ್ಳತನ ಮಾಡುತ್ತಿದ್ದ 7 ಮಂದಿಯನ್ನು ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಿನ್ನೆ ನಡೆದಿದೆ.

ಶ್ರೀ ಶಿಶಿಲೇಶ್ವರ ದೇವಾಲಯದ ದೇವರ ಕೆರೆಯಲ್ಲಿ ಸಾಕುತ್ತಿದ್ದ ಮೀನುಗಳನ್ನು ರಾತ್ರಿ ವೇಳೆ ಕದ್ದು ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಕಾರ್ಯಾಚರಣೆಗಿಳಿದ ಸ್ಥಳೀಯ ಹಿಂದೂ ಜಾಗರಣಾ ವೇದಿಕೆ ಸಂಘಟನೆಯು ರಾತ್ರಿ ವೇಳೆ ಕಾದು ಕುಳಿತಿದ್ದು, ನಿನ್ನೆಯೂ ಕಳ್ಳರು ಮೀನು ಕಳ್ಳತನಕ್ಕೆ ಬಂದಾಗ ಹಿಡಿದು ಥಳಿಸಿದ್ದಾರೆ. ಅರಸಿನಮಕ್ಕಿ ಮಸೀದಿಯ ಧರ್ಮಗುರು ಸೇರಿದಂತೆ 7 ಮಂದಿ ಸೆರೆಸಿಕ್ಕಿದ್ದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

Also Read  ಕೊಕ್ಕಡ: ಜಾತಿನಿಂದನೆ ಆರೋಪ - ಪ್ರಕರಣ ದಾಖಲು

error: Content is protected !!
Scroll to Top