ನೆಲ್ಯಾಡಿ: ಎಸ್ಡಿಪಿಐ ಸಂಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಜೂ.22, 2009 ರ ಜೂನ್ 21 ರಂದು ಈ ದೇಶದ ಜನತೆಯ ಆಶಾಕಿರಣವಾಗಿ ಸಮರ್ಪಿಸಲ್ಪಟ್ಟ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತನ್ನ ಹೋರಾಟವನ್ನು ರಾಜಕೀಯದ ಮೂಲಕ ಜನ ಮನ್ನಣೆ ಗಳಿಸುತ್ತಾ 11 ವರ್ಷಗಳನ್ನು ಪೂರೈಸಿ 12 ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂಧರ್ಭದಲ್ಲಿ ಪಕ್ಷವು ಪ್ರತಿ ವರ್ಷದಂತೆ ಈ ವರ್ಷವೂ ಜೂನ್ 21 (ಆದಿತ್ಯವಾರ) ರಂದು ದೇಶಾದ್ಯಂತ ತನ್ನ “ಸಂಸ್ಥಾಪನಾ ದಿನ” ವನ್ನು ಆಚರಿಸುವ, ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ನೀಡಿರುವ ಕರೆಯ ಮೇರೆಗೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಸೇರಿ ನೆಲ್ಯಾಡಿ ಪೇಟೆಯ ಸಾಗರ್ ಹೋಟೆಲ್ ಮುಂಬಾಗದಲ್ಲಿ ಧ್ವಜಾರೋಹಣೆಯಯನ್ನು ನಡೆಸುವುದರೊಂದಿಗೆ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

ಎಸ್ಡಿಪಿಐ ಕಡಬ ತಾಲೂಕು ಸಮಿತಿ ಸದಸ್ಯರಾದ ಸಾದಿಕ್ ಅತ್ತಾಜೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಎಸ್ಡಿಪಿಐ ಕಡಬ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ರಫೀಕ್ ನೆಲ್ಯಾಡಿ ಇವರು ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಅದೇ ರೀತಿ ದೇಶದ ಗಡಿಯಲ್ಲಿ ಹುತಾತ್ಮರಾಗಿರುವ ನಮ್ಮ ಯೋಧರಿಗೆ ಮೌನ ಪ್ರಾರ್ಥನೆಯೊಂದಿಗೆ ಗೌರವವನ್ನು ಕೂಡಾ ಸಲ್ಲಿಸಲಾಯಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನೆಲ್ಯಾಡಿ ಡಿವಿಸನ್ ಅಧ್ಯಕ್ಷರಾದ ಸಿದ್ದಿಕ್ ಎಂ, ಕೌಕ್ರಾಡಿ ಬ್ರಾಂಚ್ ಅಧ್ಯಕ್ಷರಾದ ಟಿಪ್ಪುಸುಲ್ತಾನ್, ಗೋಳಿತೊಟ್ಟು ಬ್ರಾಂಚ್ ಕಾರ್ಯದರ್ಶಿಯಾದ ಸಾದಿಕ್ ಗೋಳಿತೊಟ್ಟು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯ ಕ್ರಮದಲ್ಲಿ ಸಿದ್ದೀಕ್ ನೆಲ್ಯಾಡಿಯವರು ಸ್ವಾಗತಿಸಿ, ರಿಝ್ವಾನ್ ಗೊಳಿತೊಟ್ಟು ನಿರೂಪಿಸಿ ವಂದಿಸಿದರು. ಕೊನೆಗೆ ಸಿಹಿತಿಂಡಿಗಳನ್ನು ಹಂಚಿ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

error: Content is protected !!
Scroll to Top