ವಿದ್ಯುತ್ ಆಘಾತಕ್ಕೆ ಕಂಬಳ ಪ್ರೇಮಿ ಬಲಿ

(ನ್ಯೂಸ್ ಕಡಬ)newskadaba.com ಕಾರ್ಕಳ, ಜೂ.22, ವಿದ್ಯುತ್ ಆಘಾತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ಸಮೀಪದ ಮುಂಡ್ಲಿ ಎಂಬಲ್ಲಿ ನಡೆದಿದೆ.

ಮೃತರನ್ನು ಸಾಂತ್ರಬೆಟ್ಟು ರತ್ನವರ್ಮ ಜೈನ್(48) ಎಂದು ಗುರುತಿಸಲಾಗಿದೆ. ಇವರು ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಜನರೇಟರ್ ಆಫ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಕಂಬಳ ಕ್ಷೇತ್ರದಲ್ಲೂ ಕೂಡ ಹಲವು ಸಾಧನೆಗಳನ್ನು ಮಾಡಿ ಗುರುತಿಸಲ್ಪಟ್ಟಿದ್ದರು.

Also Read  ಮಂಗಳೂರು: ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ‌ ಮೃತದೇಹ ಪತ್ತೆ

error: Content is protected !!
Scroll to Top