ಪಿಯು ಮೌಲ್ಯಮಾಪನಕ್ಕೆ ತೆರಳದ ಮೌಲ್ಯಮಾಪಕರ ವಿರುದ್ದ ಕ್ರಮ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.22: ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲ ಪರೀಕ್ಷೆಗಳು ಮುಗಿದಿವೆ.ವಿಜ್ಞಾನ ಮೌಲ್ಯಮಾಪನದಲ್ಲಿ ಸಾಮಾಜಿಕ ಕಾಳಜಿ ಮರೆತ ಮೌಲ್ಯಮಾಪಕರು ಗೈರಾದ ಪರಿಣಾಮವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಮೌಲ್ಯಮಾಪನ ತಪ್ಪಿಸುವ ಮೌಲ್ಯಮಾಪಕರಿಗೆ ಕೊರೊನಾ ಡ್ಯೂಟಿ ಹಾಕುವ ಕರಿತು ಸುತ್ತೋಲೆ ಹೊರಡಿಸಿದೆ.


ಈ ಬಾರಿ ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯದ ನಾನಾ ಜಿಲ್ಲೆಗಳಿಂದ ಮೌಲ್ಯಮಾಪಕರು ಬೆಂಗಳೂರಿಗೆ ಹೋಗಬೇಕಿತ್ತು. ಅಲ್ಲಿಗೆ ಬಂದರೆ ಅವರು ಉಳಿದುಕೊಳ್ಳುವ ವ್ಯವಸ್ಥೆ. ಪ್ರಯಾಣ ಇತ್ಯಾದಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಇದೇ ಕಾರಣದಿಂದ ಮೌಲ್ಯಮಾಪನದ ಮೊದಲೇ ಪ್ರತಿಭಟನೆಗಳು ಆರಂಭವಾಯಿತು. ಈ ಸಮಯದಲ್ಲಿ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಪತ್ರಕ್ಕೆ ಸ್ಪಂದಿಸಿ ಹಿಂಬರವೊಂದನ್ನು ನೀಡಿದರು.

Also Read  ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮ

ಇದರಲ್ಲಿ ಸಾಮಾಜಿಕ ಕಾಳಜಿ ಇಟ್ಟುಕೊಂಡು ಇಚ್ಚೆ ಇದ್ದವರು ಮಾತ್ರ ಮೌಲ್ಯಮಾಪನಕ್ಕೆ ಹಾಜರಾಗಬಹುದು ಎನ್ನುವ ಮಾತನ್ನು ಉಲ್ಲೇಖಿಸಿದ ಪರಿಣಾಮ ಬಹಳಷ್ಟು ಮೌಲ್ಯಮಾಪಕರು ಹಿಂದೆ ಸರಿದಿದ್ದರು.ಈಗ ಮೌಲ್ಯಮಾಪನದಿಂದ ಹಿಂದೆ ಸರಿದ ಮೌಲ್ಯಮಾಪಕರಿಗೆ ಕೊರೊನಾ ಡ್ಯೂಟಿ ಹಾಕುವ ಮೂಲಕ ಇಲಾಖೆ ಕ್ರಮ ಜರುಗಿಸಿದೆ.

error: Content is protected !!
Scroll to Top