ಚಾರ್ಮಾಡಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಪಾರ ಬೆಳೆ ನಾಶ

(ನ್ಯೂಸ್ ಕಡಬ) newskadaba.com.ಮುಂಡಾಜೆ,ಜೂ.22:ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಹೊಸಮಠದಲ್ಲಿ ಭಾನುವಾರ ಅಡಿಕೆ ತೋಟಗಳಿಗೆ ನುಗ್ಗಿದ ಕಾಡಾನೆಗಳು ಅಡಿಕೆ ಮರ ತೆಂಗಿನ ಮರ, ಸೇರಿದಂತೆ ಬಾಳೆಗಿಡಗಳನ್ನು ನಾಶ ಮಾಡಿರುವುದು ವರದಿ ಯಾಗಿದೆ.


ನಾರಾಯಣ ಹಾಗೂ ಭಾಸ್ಕರ ಅವರ ತೋಟಗಳಿಗೆ ಆನೆ ದಾಳಿ ಮಾಡಿ ಅಡಿಕೆ, ತೆಂಗು ಮತ್ತು 50ಕ್ಕೂ ಅಧಿಕ ಬಾಳೆಗಿಡಗಳನ್ನು ನೆಲಕ್ಕುರುಳಿಸಿದೆ. ಮರಿಯಾನೆ ಸಹಿತ 4 ಆನೆಗಳ ಘೀಳಿಡುವಿಕೆಯ ಸದ್ದಿನಿಂದ ಎಚ್ಚರಗೊಂಡ ಮನೆಮಂದಿ ಮತ್ತು ಸ್ಥಳೀಯರು ಪಟಾಕಿ ಸಿಡಿಸಿ. ದೊಂದಿ ಬೆಳಕನ್ನು ಹಿಡಿದು ಕಾಡಿಗೆ ಓಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

error: Content is protected !!
Scroll to Top