ತಿಂಗಳ ಹಿಂದೆ ಪೂರ್ಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು‼️➤ ಕೋಡಿಂಬಾಳ – ಕೋರಿಯಾರ್ ರಸ್ತೆಯಲ್ಲಿ ಕಳಪೆ ಕಾಮಗಾರಿ..⁉️

(ನ್ಯೂಸ್ ಕಡಬ) newskadaba.com.ಕಡಬ,ಜೂ.21:ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ತಾಲೂಕಿನ ಕೋಡಿಂಬಾಳ-ಕೋರಿಯಾರ್ ಸಂಪರ್ಕ ರಸ್ತೆಯನ್ನು ಕಳೆದ ಒಂದೂವರೆ ತಿಂಗಳ ಹಿಂದೆ 2019-20ನೇ ಸಾಲಿನ 5054 ಶಾಸಕರ ವಿಶೇಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಇದೀಗ ರಸ್ತೆ ಅಲ್ಲಲ್ಲಿ ಬಿರುಕುಬಿಡಲು ಆರಂಭಿಸಿದ್ದು ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.


ಹಲವು ವರ್ಷಗಳ ಬೇಡಿಕೆಯ ನಂತರ ರಸ್ತೆ ಅಭಿವೃದ್ದಿ ಪಡಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡು ಒಂದೂವರೆ ತಿಂಗಳು ಪೂರ್ಣಗೊಳ್ಳುವ ಮೊದಲೇ ಇದೀಗ ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಗ್ರಾಮಸ್ಥರನ್ನು ಆಕ್ರೋಶ ಭರಿತರನ್ನಾಗಿಸಿದೆ. ಇದರಿಂದ ಕೆರಳಿರುವ ಗ್ರಾಮಸ್ಥರು ಕಳಪೆ ಕಾಮಗಾರಿ ವಿರುದ್ದ ಧ್ವನಿ ಎತ್ತಿದ್ದಾರೆ.

Also Read  ವಿಶೇಷ ಲೇಖನ ಜುಲೈ. 11: “ವಿಶ್ವ ಜನಸಂಖ್ಯಾ ದಿನ” - ಡಾ. ಮುರಲೀ ಮೋಹನ ಚೂಂತಾರು


ಕಾಮಗಾರಿ ನಡೆದು ತಿಂಗಳು ಕಳೆಯುದರೊಳಗಡೆ ಹೀಗಾದರೆ ಮುಂದೆ ಪರಿಸ್ಥಿತಿ ಹೇಗೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಗ್ರಾಮಸ್ಥರು ಗುತ್ತಿಗೆದಾರರ ವಿರುದ್ದ ಅಸಮದಾನ ವ್ಯಕ್ತ ಪಡಿಸಿದ್ದು ಮರುಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದಾರೆ.

error: Content is protected !!
Scroll to Top